Monday, September 28, 2026

BDA Apartments

ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರ...
Home Front Page ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ- ಗೃಹ ಸಚಿವ ಪರಮೇಶ್ವರ್

ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜೂನ್,20,2025 (www.justkannada.in): ಲೋನ್ ಕಟ್ಟುವುದು ತಡವಾಗಿದ್ದಕ್ಕೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ  ದಂಪತಿಯ ಮಗುವನ್ನ ಮೈಕ್ರೋ ಫೈನಾನ್ಸ್  ಸಿಬ್ಬಂದಿಗಳು ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್,  ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಲು ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಆದರೂ ಇಂತಹ ವರ್ತನೆ ಸರಿಯಲ್ಲ. ಮಗುವನ್ನ ಕರೆದೊಯ್ದವರು  ಕಠಿಣ ಹೃದಯಿಗಳು. ಮಾನವೀಯತೆ ಇಲ್ಲದವರು ಮಗುವನ್ನ ಅಪಹರಣ ಮಾಡಿದಾರೆ.  ಈ ಬಗ್ಗೆ ಇಂದು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾನಾಡುತ್ತೇನೆ. ಮಾತಾಡಿ‌ ಕ್ರಮ ತಗೋತೇವೆ ಎಂದರು.ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ micro finance

ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನ ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್‌. ಪಾಟೀಲ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೇನೆ. ಬಿ. ಆರ್ ಪಾಟೀಲರು ಯಾವ ಅರ್ಥದಲ್ಲಿ ಹೇಳಿದಾರೆ ಅಂತಾ ಗೊತ್ತಿಲ್ಲ. ಅವರು ನೇರವಾಗಿ ಹೇಳಿಲ್ಲ. ವಸತಿ ಇಲಾಖೆ‌ ಸಚಿವರು ಜಮೀರ್ ಇದ್ದಾರೆ. ಯಾರು‌ ಲಂಚ ಕೇಳುತ್ತಿದ್ದಾರೆ ಅಂತಾ ದೂರು‌ ಕೊಡಲಿ,  ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.vtu

Key words: Mysore, Action. Against. Microfinance,Home Minister, Parameshwar