Tuesday, September 29, 2026

BDA Apartments

ಮುಡಾ ಹಗರಣ: ವಕೀಲರಿಗೆ ಸೈಟ್ ಹಂಚಿಕೆ: ಲೋಕಾಯುಕ್ತಕ್ಕೆ ದೂರು BDA JK_Adv BDA Adv
Home Crime ಮುಡಾ ಹಗರಣ: ವಕೀಲರಿಗೆ ಸೈಟ್ ಹಂಚಿಕೆ: ಲೋಕಾಯುಕ್ತಕ್ಕೆ ದೂರು

ಮುಡಾ ಹಗರಣ: ವಕೀಲರಿಗೆ ಸೈಟ್ ಹಂಚಿಕೆ: ಲೋಕಾಯುಕ್ತಕ್ಕೆ ದೂರು

ಮೈಸೂರು,ಜೂನ್,19,2025 (www.justkannada.in): ಮೈಸೂರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಮತ್ತೊಂದು ಹಗರಣ ಬಯಲಾಗಿದೆ.

ಪ್ರಾಧಿಕಾರದ ಪರವಾಗಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರ ಪರವಾಗಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಮತ್ತು ಪ್ರಾಧಿಕಾರದ ವಕೀಲರಾಗಿದ್ದ ವೇದಮೂರ್ತಿ ಎಂಬುವವರು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದರು.  ಎದುರುದಾರರು ಪ್ರಾಧಿಕಾರದ ವಕೀಲರಾಗಿದ್ದ ವೇದಮೂರ್ತಿರವರಿಗೆ ಸೆಟ್ಮ್ ಮೆಂಟ್ ಡೀಡ್ ಮೂಲಕ ಸೈಟ್ ನೀಡಿದ್ದು 4363 ಚದುರಡಿಗಿಂತ ಹೆಚ್ಚಿನ ಅಳತೆಯ ನಿವೇಶನವನ್ನು ನೀಡಲಾಗಿದೆ, ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿ, ಎದುರುದಾರರಿಗೆ ಅನುಕೂಲ ಮಾಡಿಕೊಟ್ಟಿದ್ದರಿಂದ ಲಾಭ ಮಾಡಿಕೊಡಲಾಗಿದೆ ಎಂದು ವಕೀಲ ವೇದಮೂರ್ತಿಗೆ ನೀಡಿರುವ ನಿವೇಶನದ  ದಾಖಲೆ ಹಿಡಿದು ಎಂ.ಎ.ಮೋಹನ್ ಅವರು ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದಾರೆ.

ಉಪ್ಪು ತಿಂದ ಮನೆಗೆ ದ್ರೋಹ ಬಗೆದ ನಟೇಶ್ ನನ್ನ ಸರ್ಕಾರ ಇನ್ನೂ ಅಮಾನತು ಮಾಡಿಲ್ಲ. 40 ದಿನಗಳ ಹಿಂದೆಯೇ ದೂರು ದಾಖಲಿಸಿದ್ದರೂ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲು ಮಾಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಎಂ.ಎ.ಮೋಹನ್ ಆರೋಪಿಸಿದ್ದಾರೆ.

ಇನ್ನು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಡಾ‌ ಹೋರಾಟಗಾರ ಸ್ನೇಹಮಯಿ ಕೃಷ್ಟ, ಕಾರ್ತಿಕ್ ಲೇ ಔಟ್ ಬಿಲ್ಡರ್ ಮಂಜುನಾಥ್ ಗೆ ಅನುಕೂಲ ಮಾಡಿಕೊಡಲು ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಕೋರ್ಟ್ ನಲ್ಲಿ ಸಹಾಯ ಮಾಡಿದ್ದಕ್ಕೆ ಕಾರ್ತಿಕ್ ಲೇ ಔಟ್ ನಲ್ಲಿ ಫ್ರೀ ಸೈಟ್ ನೀಡಿದ್ದಾರೆ. ಕಾರ್ತಿಕ್ ಲೇ ಔಟ್ ನಲ್ಲಿ ಬರೋಬ್ಬರಿ 4363 ಚದರಡಿ ಸೈಟ್ ನೀಡಲಾಗಿದೆ. ನ್ಯಾಯಾಲಯದಲ್ಲಿ ಮಂಜುನಾಥ್ ಪರ ಅನುಕೂಲ ಮಾಡಿರುವುದಕ್ಕೆ ಗಿಫ್ಟ್ ನೀಡಲಾಗಿದೆ. ಈ ಹಿಂದೆ ಮಂಜುನಾಥ್ ಕಾರಿನಲ್ಲಿ ಕುಳಿತು ಹಣ ಎಣಿಸುವ ವಿಡಿಯೋ ಸಿಕ್ಕಿತ್ತು.  ಮಂಜುನಾಥ್ ಮನೆ ಮೇಲೆ‌ ಇಡಿ ದಾಳಿ ನಡೆಸಿತ್ತು. ಆದರೆ ದೂರು ದಾಖಸಿದರೂ ಕ್ರಮ‌ ಏಕಿಲ್ಲ ಅಂತ  ಎಂದು ಕಿಡಿಕಾರಿದ್ದಾರೆ.vtu

Key words: Muda, scam, Site,  allocation , Complaint , Lokayukta