Wednesday, August 12, 2026

BDA Apartments

Home Front Page ಬಿಎಸ್ ಯಡಿಯೂರಪ್ಪ ಹಿರಿಯಣ್ಣನಿದ್ದಂತೆ- ಕೆ.ಎಸ್ ಈಶ್ವರಪ್ಪ

ಬಿಎಸ್ ಯಡಿಯೂರಪ್ಪ ಹಿರಿಯಣ್ಣನಿದ್ದಂತೆ- ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ,ಜೂನ್,18,2025 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಹಿರಿಯಣ್ಣನಿದ್ದಂತೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಬಿಎಸ್ ವೈ ನಮಗೆ ಹಿರಿಯಣ್ಣ ಇದ್ದ ಆಗೆ. ನಾನು ಬಿಜೆಪಿಗೆ ಸೇರ್ಪಡೆ ಆಗಲ್ಲ. ಈ ಮಧ್ಯೆ  ರಾಜ್ಯದಲ್ಲಿ ಕುಟುಂಬ ರಾಜಕಾರಣ ನಿಲ್ಲಬೇಕು.  ಬಿಜೆಪಿ ಹಿಂದುತ್ವ ಬದಲಾಗಿ ಜಾತಿ ಅಂತಿದ್ದಾರೆ. ವಿಪಕ್ಷ  ಬಿಜೆಪಿ ಇಂದಲ್ಲ ನಾಳೆ ಸುಧಾರಣೆ ಆಗುತ್ತೆ ಎಂದು ತಿಳಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್  ನೀಡದಿದ್ದಕ್ಕೆ ಗರಂ ಆಗಿದ್ದ ಕೆಎಸ್ ಈಶ್ವರಪ್ಪ  ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಮೂಲಕ ಬಿಎಸ್ ಯಡಿಯೂರಪ್ಪ ಮತ್ತು ಮಕ್ಕಳಿಗೆ ಸೆಡ್ಡು ಹೊಡೆದಿದ್ದರು. ಈ ನಡುವೆ ಇತ್ತೀಚೆಗೆ ನಡೆದ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗನ ಅರತಕ್ಷತೆ ಕಾರ್ಯಕ್ರಮದಲ್ಲಿ ಕೆ.ಎಸ್ ಈಶ್ವರಪ್ಪ ಭಾಗಿಯಾಗಿದ್ದರು.vtu

Key words: BS Yediyurappa, elder brother, K.S. Eshwarappa