Tuesday, October 27, 2026

Dasara Wishes

Happy Dasara
Home Front Page ಐಸಿಸಿ ಟೂರ್ನಿಯಲ್ಲಿ ಭಾರತದ ಲಕ್ಷ್ಮೀ ಮೊದಲ ಮಹಿಳಾ ಮ್ಯಾಚ್ ರೆಫರಿ

ಐಸಿಸಿ ಟೂರ್ನಿಯಲ್ಲಿ ಭಾರತದ ಲಕ್ಷ್ಮೀ ಮೊದಲ ಮಹಿಳಾ ಮ್ಯಾಚ್ ರೆಫರಿ

ದುಬೈ, ಅಕ್ಟೋಬರ್ 11, 2019 (www.justkannada.in): ಭಾರತದ ಜಿ.ಎಸ್.ಲಕ್ಷ್ಮೀ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಟೂರ್ನಿಗಳಲ್ಲಿ ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿದ್ದಾರೆ.

2019ರ ಪುರುಷರ ಐಸಿಸಿ ಟಿ-20 ವಿಶ್ವಕಪ್ ಕ್ವಾಲಿಫೈಯರ್‌ನ ಲೀಗ್ ಹಂತಕ್ಕೆ ಐಸಿಸಿ ಪಂದ್ಯದ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಜೆಫ್ ಕ್ರೋವ್ ಹಾಗೂ ಲಕ್ಷ್ಮೀ ಟೂರ್ನಿಯ ಮ್ಯಾಚ್ ರೆಫರಿ ಆಗಿ ನೇಮಕಗೊಂಡಿದ್ದಾರೆ.

ಕ್ರೋವ್ 3 ಐಸಿಸಿ ಟಿ-20 ವಿಶ್ವಕಪ್ ಸಹಿತ 488 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಐಸಿಸಿ ಟಿ-20 ಅರ್ಹತಾ ಸುತ್ತಿನ ಪಂದ್ಯಗಳು ಯುಎಇನಲ್ಲಿ ಅ.18ರಿಂದ ನ.2ರ ತನಕ ನಡೆಯಲಿದೆ.