Tuesday, August 4, 2026

BDA Apartments

Home Crime ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ RCB

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ RCB

ಬೆಂಗಳೂರು,ಜೂನ್,6,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಆರ್‌ಸಿಬಿ ಆಡಳಿತ ಮಂಡಳಿ  ಘೋಷಣೆ ಮಾಡಿದೆ.

ನಿನ್ನೆ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದು ಇದೀಗ  ಮೃತಪಟ್ಟವರ ಕುಟುಂಬದ ನೆರವಿಗೆ ಆರ್ ಸಿಬಿ ಧಾವಿಸಿದೆ. ಆರ್‌ಸಿಬಿ ತನ್ನ ಅಭಿಮಾನಿಗಳಿಗಾಗಿ ಸಂತಾಪ ಸೂಚಿಸಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿದೆ.

ಇನ್ನು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳ ಪರಿಹಾರದ ಭರವಸೆಯನ್ನ ಆರ್ ಸಿಬಿ ಆಡಳಿತ ಮಂಡಳಿ ನೀಡಿದ್ದು  ಇದಕ್ಕಾಗಿ ಆರ್ ಸಿಬಿ ಕೇರ್ ನಿಧಿ ರಚನೆ ಮಾಡಲಾಗುವುದು. ಮೃತರ ಕುಟುಂಬದ ನೋವಿನಲ್ಲಿ ಭಾಗಿಯಾಗುತ್ತೇವೆ  ಎಂದು ಆರ್‌ಸಿಬಿ ಮ್ಯಾನೇಜ್  ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.vtu

Key words: RCB, Rs 10 lakh, compensation, stampede