Monday, October 5, 2026

BDA Apartments

ಪುರಸಭೆ ಕಾರ್ಯಾಲಯ ಕೆ.ಆರ್ ನಗರ BDA JK_Adv BDA Adv
Home Front Page RCB ಫೈನಲ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ

RCB ಫೈನಲ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ

ಮೈಸೂರು,ಜೂನ್,2,2025 (ww.justkannada.in):  ನಾಳೆ ಆರ್ ಸಿಬಿ- ಪಂಜಾಬ್ ಕಿಂಗ್ಸ್ ಫೈನಲ್ ಎದುರಿಸಲಿದ್ದು ಆರ್‌ಸಿಬಿ ಫೈನಲ್ ಪಂದ್ಯ ಗೆದ್ದು ಕಪ್ ಎತ್ತಿ ಹಿಡಿದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲು ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ‌ ಘೋಷಣೆ ಮಾಡಿದ್ದಾರೆ.

ಸಾಂಕೇತಿಕವಾಗಿ ಈವತ್ತೇ ಮೈಸೂರಿನ ಗನ್ ಹೌಸ್ ವೃತ್ತದಲ್ಲಿ‌ಉಚಿತ ಹೋಳಿಗೆ ಊಟ ವಿತರಣೆ ಮಾಡಲಾಯಿತು. ನಾಳೆ‌ ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಬೇಕು ಎಂದು  ಸಿಎಂ ಸಿದ್ದರಾಮಯ್ಯ ಬಳಿ‌ ಆರ್ ಸಿಬಿ ಅಭಿಮಾನಿಗಳು ಮನವಿ ಮಾಡಿದ್ದಾರೆ.

ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ‌‌ ಉಚಿತ ಹೋಳಿಗೆ ಊಟ ಹಾಕಿಸಿ. ಎಲ್ಲಾ ಕನ್ನಡಿಗರು ಸಿಹಿ, ಹೋಳಿಗೆ ರುಚಿ ಸವಿಯಲಿ. ಆರ್‌ ಸಿಬಿ ಗೆಲುವಿನ ಸಂಭ್ರಮ ಹಂಚಿಕೊಳ್ಳಲಿ  ಎಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.vtu

Key words: Free, Holige, meals , Indira Canteens, Mysore, RCB,  wins