Thursday, September 17, 2026

BDA Apartments

ಕಮಲ್ ಸರ್ , ಚಾರುಹಾಸನ್ ಅವರನ್ನು ಎಲ್ಲರೂ ನಿಮ್ಮ ತಂದೆ ಅಂತಿದ್ದಾರೆ ನಿಜಾನಾ.! BD...
Home Cinema ಕಮಲ್ ಸರ್ ,  ಚಾರುಹಾಸನ್ ಅವರನ್ನು ಎಲ್ಲರೂ ನಿಮ್ಮ ತಂದೆ ಅಂತಿದ್ದಾರೆ ನಿಜಾನಾ.!

ಕಮಲ್ ಸರ್ ,  ಚಾರುಹಾಸನ್ ಅವರನ್ನು ಎಲ್ಲರೂ ನಿಮ್ಮ ತಂದೆ ಅಂತಿದ್ದಾರೆ ನಿಜಾನಾ.!

Tamil Actor Kamala Hasan controversy statement about Kannada language 

vtu

ಮೈಸೂರು, ಮೇ.೩೦,೨೦೨೫:  ಬಹುಭಾಷ ನಟ, ತಮಿಳಿನ ಕಮಲ ಹಾಸನ್‌ ಅವರು ಇತ್ತೀಚೆಗೆ ಕನ್ನಡ ಭಾಷೆ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ತಮಿಳಿನಿಂದ ಕನ್ನಡ ಭಾಷೆ ಜನಿಸಿದ್ದು ಎಂಬರ್ಥದ ಹೇಳಿಕೆಗೆ ಕನ್ನಡಿಗರು ನಿಗಿನಿಗಿ ಕೆಂಡವಾಗಿದ್ದಾರೆ.

ಈ ನಡುವೆ ಸೋಷಿಯಲ್‌ ಮೀಡಿಯಾಗಳಲ್ಲೂ ಕಮಲ್‌ ಅಭಿಪ್ರಾಯಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಸಂತೋಷ್‌ ಕುಮಾರ್‌ ಎಂಬ ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ ಫೇಸ್‌ ಬುಕ್‌ ನಲ್ಲಿ ಬರೆದಿರುವುದು ಹೀಗಿದೆ ನೋಡಿ…

ಕಮಲ್ ಹಾಸನ್ ಸರ್……. ಒಂದು ವಿಷಯ ಹೇಳಬೇಕು ಅಂತಿದ್ದೆ. ಚಾರು ಹಾಸನ್ ಅವರನ್ನು ಎಲ್ಲರೂ ನಿಮ್ಮ ತಂದೆ ಅಂತಿದ್ದಾರೆ ನಿಜಾನಾ!!

ಅದ್ಹೆಂಗೆ ರೀ? ಅವರು ನಮ್ಮಣ್ಣ!

 

ಚಾರುಹಾಸನ್ ಅವರನ್ನು ಎಲ್ಲರೂ ನಿಮ್ಮ ತಂದೆ ಅಂತಿದ್ದಾರೆ ನಿಜಾನಾ.! kamal shivaraj

ಇಲ್ಲ ಸರ್. ಅವರಿಂದಲೇ ನೀವು ಬಂದಿದ್ದಂತೆ!  ಹಾಗಾಗಿ ಅವರೇ ನಿಮ್ಮ ಅಪ್ಪ ಆಗಬೇಕು!!

No never….ಯಾವನ್ ಹೇಳಿದ್ದು?! ನಾವಿಬ್ಬರೂ ಅಣ್ತಮ್ಮಂದಿರು!

ಸರಿ…ಪ್ರೀತಿಯಿಂದ ಅವರೆಲ್ಲ ನಿಮ್ಮಿಬ್ಬರನ್ನು ಅಪ್ಪ-ಮಗ ಅಂತಿದ್ದಾರೆ. ಒಪ್ಕೊಳಿ ಸರ್!!

ಅಯ್ಯೋ…. ಅವನ್ಯಾರೋ ಪ್ರೀತಿಯಿಂದ ಹೇಳಿದ ಅಂತ,  ತಕ್ಷಣ ಒಪ್ಪಿಕೊಳ್ಳೋಕೆ‌ ನನಗೇನು ತಲೆ ಕೆಟ್ಟಿದ್ಯಾ? ಅವನು‌ ಪ್ರೀತಿಯಿಂದ ಹೇಳಿದ ತಕ್ಷಣ  ಸಹೋದರರಿಬ್ಬರು ಅಪ್ಪ-ಮಗ ಆಗ್ಬಿಡ್ತಾರಾ? ಅದನ್ನ‌ ನಾನ್ಯಾಕೆ‌ ಒಪ್ಕೋಬೇಕು?!

ಅಯ್ಯೋ….ಪ್ರೀತಿಯಿಂದ ಹೇಳಿದ್ದಕ್ಕೂ ಜಗಳ ತೆಗೀತೀರಲ್ಲ ಸರ್!!?

ಅವರ ಪ್ರೀತಿ ಅವರಿಗೆ ಇರಲಿ ರೀ…. ಪ್ರೀತಿಯಿಂದ ಹೇಳಿದ್ರು ಅಂತ ಎಲ್ಲವನ್ನೂ ಒಪ್ಪಿಕೊಳ್ತಾ ಹೋದ್ರೆ, ನಾಳೆಯ ದಿನ ನೋಡಿದವರು ಅದನ್ನೇ ಸರಿ ಅಂತ ವಾದಿಸ್ತಾರೆ ಅಷ್ಟೇ!!

ಅದು ಹಾಗಲ್ಲ ಸರ್. ಯಾರೋ ಚಾರು ಹಾಸನ್ ಅವರನ್ನು ಮೊದಲು ನೋಡಿದ್ದರಂತೆ!! ಇನ್ಯಾರೋ ನಿಮ್ಮನ್ನು ಮೊದಲು ನೋಡಿದ್ದಂತೆ. ಹಾಗಾಗಿ ಕೆಲವರು ಚಾರು ಹಾಸನ್ ಅಪ್ಪ , ನೀವು ಮಗ ಅಂತ ವಾದಿಸಿದರೆ….. ಇನ್ನು ಕೆಲವರು ನೀವೇ ಅಪ್ಪ ಅವರು ಮಗ ಅಂತ ವಾದಿಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾರು ಸರಿ?

tamil actor kamala kamal

ಅದು ಹೇಗೆ ಸಾಧ್ಯ ರೀ? ಯಾರೋ ಮೊದಲು ಒಬ್ಬರನ್ನು ನೋಡಿದ ತಕ್ಷಣ ಅವರೇ ಅವರನ್ನು ಅಪ್ಪ ಅಂದುಬಿಟ್ಟರೆ ಹೇಗೆ?! ಇಬ್ಬರ ಗ್ರಹಿಕೆಯೂ ತಪ್ಪೇ! ವಾಸ್ತವ ಬೇರೆ ಇದೆ.

ಹಾಗಾದರೆ ನೀವಿಬ್ಬರೂ ಅಣ್ತಮ್ಮಂದಿರು ಅಂತ ಹೇಗೆ ಪ್ರೂವ್ ಮಾಡ್ತೀರ, ಹೇಳಿ?!

ನಾನು ಅವರ ತಮ್ಮನಾಗಿ ಹೇಳುತ್ತಿದ್ದೇನೆ! ನಾವಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು! ಹಾಗಾಗಿ ನಾವಿಬ್ಬರೂ ಸಹೋದರರಾಗಬೇಕೇ ಹೊರತು ಅಪ್ಪ-ಮಕ್ಕಳಲ್ಲ!! ಅವನ್ಯಾರೋ ತಲೆಕೆಟ್ಟವನ‌ ಮಾತನ್ನು ಕೇಳಬೇಡಿ…. ಆಯ್ತಾ?!

ಆಯ್ತು ಸರ್….ಅರ್ಥ ಆಯ್ತು!!

actor kamala hasan kamal hasan

ವಿ.ಸೂ: ಇದು ಕೇವಲ ಕಾಲ್ಪನಿಕ. ಕಮಲ್ ಹಾಸನ್ & ಚಾರು ಹಾಸನ್ ಅವರಿಬ್ಬರೂ ಸಹೋದರರು ಅಂತ ತಿಳಿದಿದ್ದೂ ಸಂದರ್ಭಕ್ಕನುಗುಣವಾಗಿ ಅವರ ಹೆಸರನ್ನು ಬಳಸಿಕೊಳ್ಳಲಾಗಿದೆ!!

#ಕನ್ನಡ_ತಮಿಳಿನಿಂದ_ಬಂದದ್ದಲ್ಲ

#santhuLm

key words: Tamil Actor, Kamala Hasan, controversy, Kannada language

vtu

Tamil Actor Kamala Hasan controversy statement about Kannada language