ಬೆಂಗಳೂರು, ಮೇ.೨೦,೨೦೨೫: ಮಹಾನಗರ ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ನಿವಾಸಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ೫೦ ಲಕ್ಷ ರೂ.ಗಳ ಪರಿಹಾರ ಕೇಳಿದ್ದಾರೆ.
ಮಹಾನಗರ ಪಾಲಿಕೆ ರಸ್ತೆ ನಿರ್ವಹಣೆ ಕಾರ್ಯಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಉಂಟಾದ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಬಿಬಿಎಂಪಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ರಿಚ್ಮಂಡ್ ಟೌನ್‌ನ 43 ವರ್ಷದ ಧಿವ್ಯ ಕಿರಣ್, , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಲೀಗಲ್ ನೋಟಿಸ್ ನೀಡಿದ್ದಾರೆ. ನಗರದಲ್ಲಿನ ದುಃಸ್ತರವಾಗಿರುವ ರಸ್ತೆಯಲ್ಲಿ ಸಂಚರಿಸುವ ಮೂಲಕ ಅನುಭವಿಸಿದ “ಶರೀರದ ತೀವ್ರ ಬಾದೆ ಮತ್ತು ಮಾನಸಿಕ ಕಷ್ಟ”ಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಕೇಳಿದ್ದಾರೆ.
ಮೇ ೧೪ ರಂದು ವಕೀಲ ಕೆ.ವಿ.ಲವೀನ್ ಅವರ ಮೂಲಕ ಬಿಬಿಎಂಪಿಗೆ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ. ಬೆಂಗಳೂರು ನಗರದ ರಸ್ತೆ ಗುಂಡಿಗಳಿಂದ ಉಂಟಾಗುವ ದೈಹಿಕ ನೋವಿನ ಜತೆಗೆ ಮಾನಸಿಕ ಯಾತನೆಯನ್ನು ವಿವರಿಸಿದ್ದಾರೆ. ಕೀಲು ಮೂಳೆ ತಜ್ಞ ವೈದ್ಯರನ್ನು ಮೂರ್ನಾಲ್ಕು ಬಾರಿ ಬೇಟಿಯಾಗಿರುವ ವಿಷಯ ಪ್ರಸ್ತಾಪಿಸಿರುವ ದಿವ್ಯ ಕಿರಣ್, ಈ ದೈಹಿಕ ಸಮಸ್ಯೆಗೆ ರಸ್ತೆ ಗುಂಡಿಗಳೇ ಕಾರಣ ಎಂಬುದನ್ನು ಒತ್ತಿ ಹೇಳಿದ್ದಾರೆ.
ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ದಿವ್ಯ ಕಿರಣ್ ಅವರು ದೇಹದ ನೋವಿನ ಸಲುವಾಗಿ ನಿದ್ರಾಹೀನತೆಯಿಂದ ಬಳಲುವಂತಾಗಿದೆ. ಜತೆಗೆ ಇದು ಅವರ ದೈನಂದಿನ ಕೆಲಸದ ಮೇಲೂ ಪರಿಣಾಮ ಬೀರಿ ಕಾರ್ಯ ಒತ್ತಡದಿಂದ ಮಾನಸಿಕ ಸಮಸ್ಯೆಗಳು ಎದುರಾಗುವ ಅಪಾಯವಿದೆ ಎಂದು ವಕೀಲರಾದ ಲೀನಾ ನೋಟಿಸ್ ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
key words: problems, potholes, Bangalore city, Citizens, issued a ₹ 50 lakh notice, BBMP
SUMMARY:
Physical and mental problems due to potholes in Bangalore city: Citizens have issued a ₹ 50 lakh notice to BBMP.
Divya Kiran, a 43-year-old from Richmond Town, has sent a legal notice to the Bruhat Bengaluru Mahanagara Palike (BBMP). he seeks a compensation of 5 million rupees for the ‘severe bodily pain and mental distress’ caused by his experiences while traveling on the poorly maintained roads in the city.