ಮನೆಯ ಬಾಲ್ಕನಿಯಿಂದ ಬಿದ್ದು ಯುವತಿ ಸಾವು

ಮೈಸೂರು,ಮೇ,19,2025 (www.justkannada.in): ಮನೆಯ ಬಾಲ್ಕನಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಎಸ್‌.ಆರ್‌ ರಸ್ತೆಯ ಅಕ್ಷತಾ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ.

20 ವರ್ಷದ ಅನಿಕಾ ಇಲಾಯಿ ಮೃತ ಯುವತಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಬಿ.ಎ ಓದುತ್ತಿದ್ದ ಯುವತಿ ಅನಿಕಾ ನಿನ್ನೆ ರಾತ್ರಿ ಬಾಲ್ಕನಿಯಲ್ಲಿ ಓಡಾಡುತ್ತಾ ಓದುತ್ತಿದ್ದಳು. ಈ ಮಧ್ಯೆ ಬೆಳಿಗ್ಗೆ ನೋಡಿದಾಗ ಬಾಲ್ಕನಿ ಕೆಳಗೆ ಯುವತಿಯ ಮೃತದೇಹ ಪತ್ತೆಯಾಗಿದೆ.

ಈ ಮಧ್ಯೆ ಬಾಲ್ಕನಿಯಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಯುವತಿ ಅನಿಕಾ ಮೃತ ಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅನಿಕಾ ಅವರ ಕುಟುಂಬ ಅಪಾರ್ಟ್‌ಮೆಂಟ್ ನ ಮೊದಲ ಮಹಡಿಯಲ್ಲಿ ವಾಸವಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Young woman, dies , falling , balcony ,Mysore