ಮೈಸೂರು: ಆಕಸ್ಮಿಕ ಅಗ್ನಿ ಅವಘಡ: 3 ಮನೆಗಳು ಸುಟ್ಟು ಕರಕಲು

ಮೈಸೂರು,ಮೇ,17,2025 (www.justkannada.in): ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಬೋರೆ ಆನಂದೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ,ಮನೆಯಲ್ಲಿ ಯಾರು ಇಲ್ಲದಿದ್ದ ರಿಂದ ಭಾರಿ ಅನಾಹುತ ಒಂದು ತಪ್ಪಿದೆ.

ಬೋರೆ ಆನಂದೂರು ಗ್ರಾಮದ ಶನಿವಾರೆಗೌಡ, ವೆಂಕಟೇಶ್ ಗೌಡ ಹಾಗು ಶ್ರೀನಿವಾಸಗೌಡ ಎಂಬುವವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಮನೆಗಳಲ್ಲಿ ಇದ್ದ  ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಷಯ ತಿಳದ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ  ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Key words: Mysore, fire, 3 houses, burnt