ಬೆಂಗಳೂರು,ಮೇ,14,2025 (www.justkannada.in): ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟುಹಬ್ಬವಾಗಿದ್ದು ಆದರೆ ತನ್ನ ಜನ್ಮದಿನವನ್ನ ಯಾರೂ ಆಚರಿಸಬಾರದು ಎಂದು ಕಾರ್ಯಕರ್ತರು ಅಭಿಮಾನಿಗಳಲ್ಲಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಪತ್ರದ ಮೂಲಕ ಕಾರ್ಯಕರ್ತರು ಅಭಿಮಾನಿಗಳಿಗೆ ಮನವಿ ಮಾಡಿರುವ ಡಿಕೆ ಶಿವಕುಮಾರ್, ಉಗ್ರರ ವಿರುದ್ದ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಮಯ. ಹೀಗಾಗಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ವಿನಂತಿಸುತ್ತೇನೆ. ಯಾರೂ ನನ್ನ ಹುಟ್ಟುಹಬ್ಬದ ಪ್ರಯುಕ್ತ ಫ್ಲೆಕ್ಸ್, ಬ್ಯಾನರ್ ಅಳವಡಿಸಬಾರದು ಎಂದು ಮನವಿ ಮಾಡಿದ್ದಾರೆ
ನಾಳೆ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ನನ್ನ ಭೇಟಿಗೆ ಯಾರೂ ಕೂಡ ನಿವಾಸಕ್ಕೆ ಬರಬೇಡಿ ಜನ್ಮದಿನದ ಪ್ರಯುಕ್ತ ಯಾರೂ ಸಹ ಫ್ಲಕ್ಸ್ ಬ್ಯಾನರ್ ಹಾಕಬೇಡಿ ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ ನೀವು ಇರುವ ಜಾಗದಿಂದಲೇ ನನಗೆ ಶುಭಹಾರೈಸಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
Key words: No celebrate, my birthday, tomorrow, DCM DK shivakumar