Saturday, August 15, 2026

BDA Apartments

Home Front Page ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ನಾನು ಮಾತನಾಡಲ್ಲ- ಸಚಿವ ರಾಮಲಿಂಗರೆಡ್ಡಿ

ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ನಾನು ಮಾತನಾಡಲ್ಲ- ಸಚಿವ ರಾಮಲಿಂಗರೆಡ್ಡಿ

ಬೀದರ್,ಫೆಬ್ರವರಿ,13,2026 (www.justkannada.in): ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಮಾತನಾಡಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಶಾಸಕರ ವಿದೇಶ ಪ್ರವಾಸ ಮಾಧ್ಯಮದ ಮೂಲಕ ಗೊತ್ತಾಗಿದೆ. ವಿದೇಶಿ ಪ್ರವಾಸ ಅಂದ್ರೆ ಅದೊಂದು ಅಧ್ಯಯನ ಪ್ರವಾಸ.  ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನು ಏನೇ ಮಾತನಾಡಿದರೂ ನಮ್ಮ ಪಕ್ಷಕ್ಕೆ ಹಾನಿಯಾಗುತ್ತೆ ಹೀಗಾಗಿ ನಾನು ಮಾತನಾಡಲ್ಲ ಎಂದರು.

ರಾಹುಲ್ ಗಾಂಧಿ ಸದಸ್ಯತ್ವ ರದ್ದು ಕೋರಿ ನಿಲುವಳಿ ಮಂಡನೆ ವಿಚಾರ, ಹಿಂದೆಯೂ ಇದೇ ರೀತಿ ಮಾಡಿದ್ದರು ಬಳಿಕ ಕೋರ್ಟ್ ನಲ್ಲಿ ಏನಾಯ್ತು. ಬಿಜೆಪಿಯವರಿಗೆ ಹೊಟ್ಟೆ ಸಂಕಟ ತಡೆದುಕೊಳ್ಳಲು ಆಗುತ್ತಿಲ್ಲ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಎಲ್ಲವನ್ನೂ ಬಹಿರಂಗಪಡಿಸಿದರು ಅದಕ್ಕೆ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದರು.

ಅಮೇರಿಕಾವೇ ಸುಂಕ ಕಡಿಮೆ ಮಾಡಿದೆ ಎಂಬ ವಿಚಾರ, ಜಟ್ಟಿ ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದಾಂಗಾಯ್ತು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದರು.

Key words: I don’t know, CM change, Minister, Ramalingareddy