ಅಶ್ಲೀಲ ಪೋಟೊ ಹರಿಬಿಡುವುದಾಗಿ ಮಹಿಳೆಗೆ ಬ್ಲಾಕ್ ಮೇಲ್: 1.5 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪಿ ಅಂದರ್

ಮೈಸೂರು,ಮೇ,13,2025 (www.justkannada.in): ಅಶ್ಲೀಲ ಪೋಟೋ ಹರಿಬಿಡುವುದಾಗಿ ಮಹಿಳೆಗೆ ಬ್ಲಾಕ್ ಮೇಲ್ ಮಾಢಿ  1.5 ಲಕ್ಷ ರೂ. ಹಣ ವಸೂಲಿ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ವೀರೇಶ್ ಕುಮಾರ್ (28) ಬಂಧಿತ ಆರೋಪಿ. ಮೂಲತಃ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದವನಾದ ವೀರೇಶ್‌ ಕುಮಾರ್ ವಾಟ್ಸಪ್ ಮೂಲಕ ಹುಣಸೂರು ನಗರದ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದ.

ಈ ಮಧ್ಯೆ ಮಹಿಳೆಗೆ ತಾಯಿ, ಮಕ್ಕಳ ಅಶ್ಲೀಲ ಪೋಟೋ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡಿದ್ದ ಆರೋಪಿ ವಿರೇಶ್ ಕುಮಾರ್ ಮಹಿಳೆಯಿಂದ 1.5 ಲಕ್ಷ ರೂ. ಹಣ ಪಡೆದಿದ್ದ. ಬಳಿಕ ಮತ್ತೆ ಹಣಕ್ಕಾಗಿ ವೀರೇಶ್ ಪೀಡಿಸುತ್ತಿದ್ದು, ಇದರಿಂದ ಬೇಸತ್ತ ಗೃಹಿಣಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಗದಗ್‌ ನ ಹೋಟೆಲ್‌ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವೀರೇಶ್‌ ಕುಮಾರನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Key words: Blackmail, woman, Rs. 1.5 lakh, Accused, Arrest, Mysore