ನವದೆಹಲಿ,ಮೇ,10,2025 (www.justkannada.in): ಭಾರತ-ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನತೆ ತಣ್ಣಗಾಗುತ್ತಿದ್ದು ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವ ಬಗ್ಗೆ ಈಗಾಗಲೇ ಮಾಹಿತಿ ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ಸಚಿವ ಜೈ ಶಂಕರ್ , ಉಗ್ರರ ವಿರುದ್ದ ಭಾರತದ ಸಮರ ನಿರಂತರವಾಗಿರುತ್ತದೆ. ಸೇನಾ ಪಡೆ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಭಾರತ ಪಾಕ್ ನಡುವೆ ಕದನ ವಿರಾಮ ಘೋಷಣೆಗೆ ಸಮ್ಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಭಾರತ-ಪಾಕಿಸ್ತಾನ ಕದಮ ವಿರಾಮಕ್ಕೆ ಒಪ್ಪಿಕೆ ಸೂಚಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
Key words: India, war, against, terrorist, continuous- Foreign Minister, Jaishankar