ಮೈಸೂರು, ಮೇ೦೬,೨೦೨೫: ಈ ಹಿಂದೆ ಹಲವು ಬಾರಿ ಉಗ್ರರ ಬೆದರಿಕೆ ಕರಿನೆರಳು ಎದುರಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರು. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಸೇರಿದಂತೆ ಜಗತ್ತಿನ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ನಗರ ಮೈಸೂರು. ಒಂದುವರೆ ದಶಕದ ಹಿಂದೆ ಮೈಸೂರು ನಗರದಲ್ಲಿ ಪಾಕಿಸ್ತಾನ ಮೂಲಕ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.
ಫಾಹದ್ ಮತ್ತು ಆಲಿ ಹುಸೇನ್ ಬಂಧಿತರು. ಆಗಲೇ ಮೈಸೂರು ನಗರ ಸ್ಲೀಪರ್ ಸೆಲ್ ಗಳ ಆಶ್ರಯತಾಣ ಎಂಬ ಶಂಕೆ ವ್ಯಕ್ತವಾದದ್ದು.
ಜತೆಗೆ ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಸಿಟಿ. ಈ ಹಿನ್ನೆಲೆಯಲ್ಲಿ ಬೆದರಿಕೆ ಕರೆಗಳು ನಿರಂತರ. ದಶಕದ ಹಿಂದೆ ದಸರಾ ಮಹೋತ್ಸವದ ವೇಳೆ ಇಂಥದ್ದೆ ಬೆದರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಪೊಲೀಸರು ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಘಟನೆ ಹಿನ್ನೆಲೆ:
ಮೈಸೂರಿನಲ್ಲಿ ಪಾಕಿಸ್ತಾನ ಮೂಲದ ಉಗ್ರರ ಬಂಧನದ ಒಂದು ಪ್ರಮುಖ ಘಟನೆ 2006 ರ ವೇಳೆ ನಡೆದಿದೆ. ಕರ್ನಾಟಕ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆಯಲ್ಲಿ ಈ ಉಗ್ರರನ್ನು ಬಂಧಿಸಲಾಗಿತ್ತು. ಈ ಘಟನೆಯು ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ಗಂಭೀರವಾಗಿ ಎತ್ತಿಹಿಡಿದಿತ್ತು.
ಬಂಧಿತರನ್ನು ಲಷ್ಕರ್-ಎ-ತೊಯ್ಬಾ ಅಥವಾ ಹುಜೀ (ಹರಕತುಲ್ ಜಿಹಾದ್ ಅಲ್ ಇಸ್ಲಾಮಿ) ನಂತಹ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು. ಇವರ ಮೇಲೆ ಭಾರತದಲ್ಲಿ ಸ್ಫೋಟನೆಗಳು, ದಾಳಿ ತಂತ್ರ ಹಾಗೂ ಗೂಢಚರ್ಯಾ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪಗಳು ಇದ್ದವು. ಈ ಬಂಧನೆ ನಂತರ, ಮೈಸೂರು ಸೇರಿದಂತೆ ಕರ್ನಾಟಕದ ಇತರ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.
ಯಾರಿವರು..?
ಮೈಸೂರಿನಲ್ಲಿ ಬಂಧಿತರಾದ ಇಬ್ಬರು ಪ್ರಮುಖ ಆರೋಪಿಗಳು ಸಯ್ಯದ ಫಹಾದ್ (Mohammed Koya alias Mohammed Fahad) ಮತ್ತು ಅಲಿ ಹುಸೇನ್ ಸಿದ್ದಿಕಿ (Mohammed Ali Hussain Siddiqui). ಇವರು ಪಾಕಿಸ್ತಾನ ಮೂಲದ ಉಗ್ರಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರೆಂದು ಭಾರತೀಯ ತನಿಖಾ ಸಂಸ್ಥೆಗಳು ಹೇಳಿದ್ದವು.
ಫಹಾದ್ :
ಸಯ್ಯದ ಫಹಾದ್ ಮೂಲತಃ ಲಖನೌ (ಉತ್ತರ ಪ್ರದೇಶ) ನಿವಾಸಿ. ಈತ ಲಷ್ಕರ್-ಎ-ತೊಯ್ಬಾ ಮತ್ತು ಹುಜೀ ಸಂಘಟನೆಗಳ ಸಂಪರ್ಕ ಹೊಂದಿದ್ದ ಶಂಕಿತ. ಭಾರತದ ವಿವಿಧ ನಗರಗಳಲ್ಲಿ ಗೂಢಚರ್ಯಾ ಚಟುವಟಿಕೆ ಹಾಗೂ ಬಾಂಬ್ ಸ್ಫೋಟಗಳ ತಂತ್ರಜ್ಞಾನ ಮತ್ತು ಯೋಜನೆಗಳಲ್ಲಿ ತೊಡಗಿದ್ದನೆಂದು ಆರೋಪಿಸಲಾಗಿದೆ.
ಅಲಿ ಹುಸೇನ್ ಸಿದ್ದಿಕಿ :
ಮೂಲತಃ ಪಾಕಿಸ್ತಾನ ಮೂಲದ ವ್ಯಕ್ತಿ, ಭಾರತೀಯ ನಗರಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಂದ ಹಣ, ಶಸ್ತ್ರಾಸ್ತ್ರ ತರಬೇತಿ ಹಾಗೂ ಮಾರ್ಗದರ್ಶನ ಪಡೆದುಕೊಂಡಿದ್ದ.
ಈ ಇಬ್ಬರ ಬಂಧನದ ನಂತರ, ಕೇಂದ್ರ ಗುಪ್ತಚರ ಇಲಾಖೆ (IB), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಘಟನೆಯಿಂದ ಕರ್ನಾಟಕದಲ್ಲಿಯೂ ಉಗ್ರ ಚಟುವಟಿಕೆಗಳ ಜಾಲವಿದ್ದುಕೊಂಡಿದೆ ಎಂಬ ಆತಂಕ ಹೆಚ್ಚಾಗಿತ್ತು.
ಬಂಧನ ಬಳಿಕ….
ಸಯ್ಯದ ಫಹಾದ್ ಮತ್ತು ಅಲಿ ಹುಸೇನ್ ಸಿದ್ದಿಕಿ ಅವರನ್ನು ಬಂಧಿಸಿದ ನಂತರ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (IPC), ವಿಪತ್ತು ನಿರೋಧಕ ಕಾಯ್ದೆ (Unlawful Activities Prevention Act – UAPA), ಸ್ಫೋಟಕ ವಸ್ತು ಕಾಯ್ದೆ (Explosives Act) ಮತ್ತು ವಿದೇಶಿ ನಾಗರಿಕ ಕಾಯ್ದೆಗಳಡಿ ಪ್ರಕರಣಗಳನ್ನು ದಾಖಲಿಸಲಾಯಿತು.
ಮುಖ್ಯ ಆರೋಪಗಳು
ಭಾರತದಲ್ಲಿ ಸ್ಫೋಟನೆ, ಉಗ್ರ ಚಟುವಟಿಕೆ ಹಾಗೂ ಗೂಢಚರ್ಯೆಗೆ ಸಂಚು ರೂಪಿಸುವುದು. ಭಾರತದಲ್ಲಿನ ಮಹತ್ವದ ಸೈನಿಕ ಹಾಗೂ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ಮಾಡುವ ಯೋಜನೆ. ವಿದೇಶಿ ಹಣ ಮತ್ತು ಶಸ್ತ್ರಾಸ್ತ್ರಗಳ ಅಕ್ರಮ ಸಾಗಣೆ. ಪಾಕಿಸ್ತಾನ ಗೂಢಚರ ಸಂಸ್ಥೆ ISI ನೊಂದಿಗೆ ಸಂಪರ್ಕ ಹೊಂದಿರುವ ಶಂಕೆ.
ತನಿಖಾ ಸಂಸ್ಥೆಗಳು
ಕರ್ನಾಟಕ ಪೊಲೀಸರ ಜೊತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಗುಪ್ತಚರ ವಿಭಾಗ (IB) ಈ ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿದವು. ಬಂಧಿತರಿಂದ ಲ್ಯಾಪ್‌ಟಾಪ್‌ಗಳು, ಹಸ್ತಲಿಖಿತ ನಕ್ಷೆಗಳು, ಸಿಮ್ ಕಾರ್ಡ್‌ಗಳು ಮತ್ತು ಅಂತರಾಷ್ಟ್ರೀಯ ಕರೆ ರೆಕಾರ್ಡ್‌ಗಳಂತಹ ಸಾಕ್ಷ್ಯಗಳು ವಶಪಡಿಸಿಕೊಳ್ಳಲಾಯಿತು.
ಆಧಾರದ ಮೇಲೆ ಚಾರ್ಜ್‌ಶೀಟ್:
NIA 2013ರ ವೇಳೆಗೆ ಫಹಾದ್ ಮತ್ತು ಸಿದ್ದಿಕಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತು. ಅವರನ್ನು ಭಾರತೀಯ ಗೂಢಚರ್ಯಾ ನಿಯಮಗಳ (Official Secrets Act) ಉಲ್ಲಂಘನೆಗೂ ಆರೋಪಿಸಿದರು.
ಅಂತಿಮವಾಗಿ…
ಈ ಪ್ರಕರಣವು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದೆ. NIA ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಪ್ರಕರಣದ ವಿವರಗಳನ್ನು ನೀಡಿದ್ದು, 2013ರ ಫೆಬ್ರವರಿ 20 ರಂದು 12 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಪರಿಣಾಮವಾಗಿ, 2013ರ ಮೇ 2ರಂದು ಮೊದಲ ಪೂರಕ ಚಾರ್ಜ್‌ಶೀಟ್ ಮತ್ತು 2014ರ ಮೇ 27ರಂದು ಎರಡನೇ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಯಿತು .
ಈ ಪ್ರಕರಣವು ಭಾರತೀಯ ಮುಜಾಹಿದೀನ್ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಆರೋಪಿಗಳ ವಿರುದ್ಧದ ಪ್ರಮುಖ ತನಿಖೆಯಾಗಿದ್ದು, NIA ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಅಣಕು ಅಭ್ಯಾಸ ಇಲ್ಲ:
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಎನ್ಡಿಐಎ ಇನ್ನೂರಕ್ಕೂ ಹೆಚ್ಚು ನಗರಗಳಲ್ಲಿ ನಾಳೆ ಅಣಕು ಅಭ್ಯಾಸ ನಡೆಸಲು ಸಜ್ಜಾಗಿದೆ.
ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರನ್ನು ಜಸ್ಟ್ ಕನ್ನಡ ಸಂಪರ್ಕಿಸಿದಾಗ, ಈ ತನಕ ಅಣಕು ಅಭ್ಯಾಸ ನಡೆಸುವ ನಿಟ್ಟಿನಲ್ಲಿ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಇಂಥ ಸೂಚನೆ ಬಂದಲ್ಲಿ ಖಂಡಿತ ಅದನ್ನು ಮಾಧ್ಯಮಗಳ ಗಮನಕ್ಕೆ ತರುವುದಾಗಿ ಸ್ಪಷ್ಟಪಡಿಸಿದರು.
key words: “SLEEPER CELL”, Pakistan, terrorists, Mysuru, No mock drill, Fahad, Ali Husain,
SUMMARY:
“SLEEPER CELL” of Pakistan-based terrorists Mysuru: No mock drill tomorrow
Mysuru is a cultural city that has faced terror threats many times in the past. Mysore is a favourite destination for tourists from all over the world, including the world famous Ambavilasa Palace. A decade and a half ago, two suspected terrorists were arrested from Mysuru city by Pakistan.