ಬೆಂಗಳೂರು, ಮೇ 05,2025 (www.justkannada.in): ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮೇಜರ್ ಸರ್ಜರಿ ನಡೆಸಲಾಗಿದ್ದು16 ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಎಂ ಸಚಿವಾಲಯದಲ್ಲಿ ಸಿಬ್ಬಂದಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ 16 ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. 16 ಜನ ಸಿಬ್ಬಂದಿಗೆ ಮೂಲ ಇಲಾಖೆಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಒಂಬತ್ತು ಸಿಬ್ಬಂದಿ ಮತ್ತು ಸಿಎಂ ಪರಿಹಾರ ನಿಧಿ ವಿಭಾಗದ ಏಳು ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ ಸಿಎಂ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಅನ್ಯಸೇವೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಮಧು ಎನ್, ನಯನ ಕುಮಾರಿ ಬಿ.ಎಲ್, ನವೀನ್ ಕುಮಾರ್, ಬಿ. ಎನ್, ಗೀತಾ ಎನ್, ಸವಿತಾ ಟಿ.ಡಿ, ಪರಮೇಶ್ ಹೆಚ್್ ಮತ್ತು ಗಂಗಾಧರ ಎನ್. ಆರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.
Key words: CM Ministry, 16 Staff, Released, from, Duty