Sunday, September 13, 2026

BDA Apartments

ಗಜಪಡೆಗೆ ಅಂತಿಮ ತೂಕ ಪರೀಕ್ಷೆ: ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅರ್ಜುನ್ ಅಂಡ...
Home DASARA-2019 ಗಜಪಡೆಗೆ ಅಂತಿಮ ತೂಕ ಪರೀಕ್ಷೆ: ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂ……

ಗಜಪಡೆಗೆ ಅಂತಿಮ ತೂಕ ಪರೀಕ್ಷೆ: ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂ……

ಮೈಸೂರು:8 ಅ, 2019(www.justkannada.in):  ಮೈಸೂರು ದಸರಾ ಹಿನ್ನೆಲೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ  ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ಆನೆಗಳಿಗೆ ಅಂತಿಮ ತೂಕ ಪರೀಕ್ಷೆ  ನಡೆಸಲಾಯಿತು.

ಕಾಡಿನಿಂದ ನಾಡಿಗೆ ಬಂದ ವೇಳೆ ಅರ್ಜುನ ಅಂಡ್ ಟೀಂಗೆ ತೂಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ದಸರಾ ಗಜಪಡೆಯ ಆನೆಗಳಿಗೆ ದಿನ ನಿತ್ಯ ತಾಲೀಮು ನಡೆಸಿ ಉತ್ತಮ ಆಹಾರ ನೀಡಲಾಗಿತ್ತು. ಹೀಗಾಗಿ ಅರ್ಜುನ ನೇತೃತ್ವದ ಗಜಪಡೆಯ ಆನೆಗಳು ಇದೀಗ ಮೊದಲಿಗಿಂತ ಈಗ ತೂಕವನ್ನ ಹೆಚ್ಚಿಸಿಕೊಂಡಿವೆ.

750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿರುವ ಕ್ಯಾಪ್ಟನ್ ಅರ್ಜುನ ನಾಡಿಗೆ ಬಂದ ವೇಳೆ 5800 ಕೆಜಿ ತೂಕ ಹೊಂದಿದ್ದ. ಈಗ 6040 ಕೆಜಿ ತೂಕವನ್ನ ಹೊಂದಿದ್ದಾನೆ. ಈ ಮೂಲಕ 240 ಕೆಜಿ ತೂಕವನ್ನ ಕ್ಯಾಪ್ಟನ್ ಅರ್ಜುನ ಹೆಚ್ಚಿಸಿಕೊಂಡಿದ್ದಾನೆ.

ಈಶ್ವರ ಬಂದಾಗ 3995 ಕೆಜಿ ಇದ್ದ ಈಗ 4270 ಕೆಜಿ ತೂಕ ಹೊಂದಿದ್ದಾನೆ. ಧನಂಜಯ ಬಂದಾಗ 4460 ಕೆಜಿ ಇದ್ದನು. ಈಗ 4710 ಕೆಜಿ ತೂಕ ತೂಗುತ್ತಿದ್ದಾನೆ. ಇನ್ನು ವಿಜಯಾ ಬಂದಾಗ 2825 ಕೆಜಿ ಇದ್ದ. ಈಗ 2970 ಕೆಜಿ ತೂಕ ಹೊಂದಿದ್ದಾನೆ.

Key words: mysore dasara-2019-arjuna-team- Weight- Increase