8ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾದ ಕ್ಯಾಪ್ಟನ್ ಅರ್ಜುನ: ಕಣ್ತುಂಬಿಕೊಳ್ಳಲು ಕಾತರರಾಗಿರುವ ಲಕ್ಷಾಂತರ ಜನರು…

ಮೈಸೂರು,ಅ,8,2019(www.justkannada.in): ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಚಿನ್ನದ ಅಂಬಾರಿ ಹೊತ್ತು  ಹೆಜ್ಜೆ ಹಾಕಲು ಕ್ಯಾಪ್ಟನ್ ಅರ್ಜುನ ಸಜ್ಜಾಗಿದ್ದಾನೆ.

ಕ್ಪಾಪ್ಟನ್ ಅರ್ಜುನ ಈಗಾಗಲೇ 7 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ್ದಾನೆ. ಇಂದು 8 ನೇ ಬಾರಿಗೆ ಅಂಬಾರಿ ಹೊರಲು ಅರ್ಜುನ ಸಜ್ಜಾಗಿದ್ದು, ಕೊನೆಯ ಅಂಬಾರಿ ಹೊತ್ತು ಸಾಗಲಿರುವ ಅರ್ಜುನನ್ನು ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ.

ಕ್ಯಾಪ್ಟನ್ ಅರ್ಜುನನಿಗೆ 59 ವರ್ಷವಾಗಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನನ್ನ  ಮಾವುತ ವಿನು ,ಕಾವಾಡಿ ಮಧು ಮುನ್ನಡೆಸಲಿದ್ದಾರೆ. ಅರ್ಜುನ ಕಳೆದ 19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾನೆ.

ಅರ್ಜುನ ಆನೆಗಿಂದು ಸ್ಪೇಷಲ್ ಫುಡ್…

ಅರಮನೆಯಿಂದ  ಬನ್ನಿಮಂಟಪದವರೆಗೆ 750ಕೆಜಿ ತೂಕದ  ಅಂಬಾರಿ ಹೊತ್ತು ಸಾಗಲಿರುವ ಅರ್ಜು‌ನನಿಗೆ ಆಯಾಸವಾಗುತ್ತದೆ. ಈ ಹಿನ್ನಲೆ ಅರ್ಜುನನಿಗೆ ಸ್ಪೇಷಲ್ ಫುಡ್ ನೀಡಲಾಗುತ್ತಿದೆ. ಕಬ್ಬು, ಬೆಲ್ಲ, ಕಾಯಿ, ಗ್ಲೂಕೋಸ್, ಗರಿಕೆಯ ವಿಶೇಷ ಆಹಾರ ನೀಡಿ ಅರ್ಜುನನ್ನ ತಯಾರಿ ಮಾಡಲಾಗುತ್ತಿದೆ.

Key words: mysore dasara-2019-arjuna- ambari-jamboo savari