Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page 2ನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಮುಷ್ಕರ

2ನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಮುಷ್ಕರ

ಬೆಂಗಳೂರು,ಏಪ್ರಿಲ್,16,2025 (www.justkannada.in):  ಡೀಸೆಲ್ ಬೆಲೆ ಇಳಿಕೆ ಸೇರಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ನಡೆಸುತ್ತಿರುವ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ.

ಮೊನ್ನೆ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದು ನಿನ್ನೆಗಿಂತ  ಇಂದು ಮುಷ್ಕರ ತೀವ್ರ ಸ್ವರೂಪ ಪಡೆದಿದೆ. ರಾಜ್ಯದಲ್ಲಿ ಲಾರಿಗಳ ಸಂಚಾರ ಬಂದ್ ಆಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಲಾರಿಗಳ ಬಂದಿಲ್ಲ.  ಎಪಿಎಂಸಿಯಲ್ಲಿ ಲಾರಿಗಳು ನಿಂತಲ್ಲೇ ನಿಂತಿವೆ.

ನಿನ್ನೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಲಾರಿ ಮಾಲೀಕರ ಜೊತೆ ನಡೆಸಿದ ಮೊದಲ ಸುತ್ತಿನ ಸಭೆ ವಿಫಲವಾಯಿತು. ನಂತರ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರು ಲಾರಿ ಮಾಲೀಕರ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾದ ಹಿನ್ನೆಲೆ ಲಾರಿ ಮಾಲೀಕರು, ಚಾಲಕರು ಮುಷ್ಕರ ಮುಂದುವರೆಸಿದ್ದಾರೆ.

Key words: Lorry owner, strike,  2nd day