Saturday, August 15, 2026

BDA Apartments

Home Cinema ಬೆಟ್ಟಿಂಗ್ ಆ್ಯಪ್ ಪ್ರಚಾರ: ನಟ ಪ್ರಕಾಶ್ ರಾಜ್ ಸೇರಿ 25 ನಟ, ನಟಿಯರ ವಿರುದ್ದ ಪ್ರಕರಣ...

ಬೆಟ್ಟಿಂಗ್ ಆ್ಯಪ್ ಪ್ರಚಾರ: ನಟ ಪ್ರಕಾಶ್ ರಾಜ್ ಸೇರಿ 25 ನಟ, ನಟಿಯರ ವಿರುದ್ದ ಪ್ರಕರಣ ದಾಖಲು  

ನವದೆಹಲಿ,ಮಾರ್ಚ್,20,2025 (www.justkannada.in): ಬೆಟ್ಟಿಂಗ್‌ ಆ್ಯಪ್ ಪ್ರಚಾರ ಮಾಡಿದ್ದಕ್ಕೆ ತೆಲಗು ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ,  ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸೇರಿದಂತೆ ಟಾಲಿವುಡ್ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ  ಮೇರೆಗೆ ಹೈದರಾಬಾದ್‌ನ ಮಿಯಾಪುರ್ ಪೊಲೀಸರು  ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್, ಅನನ್ಯಾ, ಹನುಮಂತು, ಶ್ರೀಮುಖಿ ಮತ್ತು ಇತರ ಪ್ರಭಾವಶಾಲಿಗಳ ವಿರುದ್ಧ ಬೆಟ್ಟಿಂಗ್ ಮತ್ತು ಜೂಜಾಟದ ಅಪ್ಲಿಕೇಶನ್ ಗಳನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ

Key words: Betting app, promotion, Case, filed