Tuesday, September 29, 2026

BDA Apartments

ಸದ್ಗುರು ಜೊತೆ ವೇದಿಕೆ ಹಂಚಿಕೊಡಿದ್ದ ಡಿಸಿಎಂ ಡಿಕೆಶಿ ವಿರುದ್ದ ಸಚಿವ ಕೆ.ಎನ್...
Home Front Page ಸದ್ಗುರು ಜೊತೆ ವೇದಿಕೆ ಹಂಚಿಕೊಡಿದ್ದ ಡಿಸಿಎಂ ಡಿಕೆಶಿ ವಿರುದ್ದ ಸಚಿವ ಕೆ.ಎನ್.ರಾಜಣ್ಣ ಕಿಡಿ

ಸದ್ಗುರು ಜೊತೆ ವೇದಿಕೆ ಹಂಚಿಕೊಡಿದ್ದ ಡಿಸಿಎಂ ಡಿಕೆಶಿ ವಿರುದ್ದ ಸಚಿವ ಕೆ.ಎನ್.ರಾಜಣ್ಣ ಕಿಡಿ

ಹಾಸನ,ಮಾರ್ಚ್,1,2025 (www.justkannada.in): ಮಹಾಶಿವರಾತ್ರಿಯಂದು ಸದ್ಗುರು ಜಗ್ಗಿ ವಾಸುದೇವ್ ಅವರು ಕೊಯಮತ್ತೂರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ ನ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಸಹಕಾರ ಸಚಿವ ಕೆ.ಎನ್ ರಾಜಣ್ಣ ಸಹ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎನ್ ರಾಜಣ್ಣ, ಸದ್ಗುರು ಜೊತೆ ಡಿಕೆ ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದು ಎಷ್ಟು ಸರಿ? ಡಿ.ಕೆ.ಶಿವಕುಮಾರ್ ಅವರ ನಡೆ ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ? ಅವರೇ ಹೇಳಬೇಕು ಎಂದರು.ಸದ್ಗುರು ಜೊತೆ ವೇದಿಕೆ ಹಂಚಿಕೊಡಿದ್ದ ಡಿಸಿಎಂ ಡಿಕೆಶಿ ವಿರುದ್ದ ಸಚಿವ ಕೆ.ಎನ್...

ಈ ಹಿಂದೆ, ರಾಹುಲ್ ಗಾಂಧಿ ಯಾರು? ಅವರು ಗೊತ್ತೇ ಇಲ್ಲ ಎಂದು ಸದ್ಗುರು ಹೇಳಿದ್ದರು. ಅಂತವರ ಜೊತೆ ವೇದಿಕೆ ಕಾರ್ಯಕ್ರಮ ಹಂಚಿಕೊಳ್ತಾರೆ ಅಂದ್ರೆ ಇದರ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಉತ್ತರ ಕೊಡಬೇಕು ಎಂದು  ಅಸಮಾಧಾನ ವ್ಯಕ್ತಪಡಿಸಿದರು.

Key words: Minister, KN Rajanna, DCM DK Shivakumar, Sadguru