Monday, October 5, 2026

BDA Apartments

Home Front Page ಜಿ.ಪಂ, ತಾ.ಪಂ ಚುನಾವಣೆ ಯಾವಾಗ?  ಹೈಕೋರ್ಟ್ ಗೆ ಸ್ಪಷ್ಟನೆ ಕೊಟ್ಟ ರಾಜ್ಯ ಸರ್ಕಾರ

ಜಿ.ಪಂ, ತಾ.ಪಂ ಚುನಾವಣೆ ಯಾವಾಗ?  ಹೈಕೋರ್ಟ್ ಗೆ ಸ್ಪಷ್ಟನೆ ಕೊಟ್ಟ ರಾಜ್ಯ ಸರ್ಕಾರ

ಬೆಂಗಳೂರು, ಫೆಬ್ರವರಿ,17,2025 (www.justkannada.in): ಮೇ ತಿಂಗಳ ಬಳಿಕ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸುವುದಾಗಿ ಹೈಕೋರ್ಟ್​ ಗೆ  ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ  ಮಾಹಿತಿ ನೀಡಿದ್ದಾರೆ.ಜಿ.ಪಂ, ತಾ.ಪಂ ಚುನಾವಣೆ ಯಾವಾಗ? ಹೈಕೋರ್ಟ್ ಗೆ ಸ್ಪಷ್ಟನೆ ಕೊಟ್ಟ ರಾಜ್ಯ ಸರ್ಕಾರ n...

3 ವರ್ಷಗಳಾದರೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತ್ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ‌ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ವಾದ ಮಂಡಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು,  ಮುಂದೆ ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.ಜಿ.ಪಂ high court

ಈ ವೇಳೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮೇ ತಿಂಗಳ ಬಳಿಕ ಎಲೆಕ್ಷನ್ ನಡೆಸುವುದಾಗಿ ತಿಳಿಸಿದರು. ಮೇ ತಿಂಗಳೊಳಗೆ ಮೀಸಲಾತಿ ಪ್ರಕಟಿಸಲಾಗುತ್ತೆ. ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕೊಡಲಾಗುವುದು ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿತು.

Key words: ZP, TP, election, state government, High Court