Sunday, August 2, 2026

BDA Apartments

Home Cinema ಮೈಸೂರಿನಲ್ಲಿ ಇಂದು ಮತ್ತು ನಾಳೆ ನಟ ಡಾಲಿ ಧನಂಜಯ್ ಮದುವೆ ಸಂಭ್ರಮ

ಮೈಸೂರಿನಲ್ಲಿ ಇಂದು ಮತ್ತು ನಾಳೆ ನಟ ಡಾಲಿ ಧನಂಜಯ್ ಮದುವೆ ಸಂಭ್ರಮ

ಮೈಸೂರು,ಫೆಬ್ರವರಿ,15,2025 (www.justkannada.in): ಇಂದು ಮತ್ತು ನಾಳೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಮದುವೆ ಕಾರ್ಯ ನಡೆಯಲಿದ್ದು, ವಿವಾಹ ಮಹೋತ್ಸವಕ್ಕೆ ಮೈಸೂರಿನ ವಸ್ತು ಪ್ರದರ್ಶನದ ಆವರಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.

ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನೆರವೇರಲಿದ್ದು, ಚಿತ್ರರಂಗದ ಕಲಾವಿದರು, ರಾಜಕೀಯ ಕ್ಷೇತ್ರದ ಗಣ್ಯರು, ನಟ ಡಾಲಿ ಧನಂಜಯ್ ಅಭಿಮಾನಿಗಳು ಸೇರಿ ಸಾವಿರಾರು ಸಂಖ್ಯೆಯಲ್ಲಿ  ಮದುವೆಗೆ ಆಗಮಿಸುವ ನಿರೀಕ್ಷೆ ಇದೆ.  ಸಹನಟ ಅರುಣ್ ಸಾಗರ್ ನೇತೃತ್ವದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸಿದ್ದತಾ ಕೆಲಸ ಅದ್ದೂರಿಯಾಗಿ ನಡೆಯುತ್ತಿದ್ದು, ಈಗಾಗಲೇ ಮದುವೆ ಸೆಟ್ ಸಿದ್ದಗೊಂಡಿದೆ.

ನಟ ಡಾಲಿ ಧನಂಜಯ್ ಹಸಮಣೆ ಏರಲಿರುವ ಕಲ್ಯಾಣ ಮಂಟಪ ದೇವಾಲಯದ ರೂಪದಲ್ಲಿ ನಿರ್ಮಾಣವಾಗಿದ್ದು, ಇಂದು ಸಂಜೆ ಆರತಕ್ಷತೆಗೆ ರೋಮನ್ ಶೈಲಿಯ ಮಾದರಿ ಮಂಟಪ  ಸಿದ್ದಪಡಿಸಲಾಗುತ್ತಿದೆ. ಕಂಬಗಳನ್ನ ಬಗೆ ಬಗೆ ಹೂಗುಚ್ಛಗಳು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಲಾಗಿದ್ದು, ಹಳೆ ಮೈಸೂರು ಮತ್ತು ಹೊಯ್ಸಳ ಶೈಲಿಯಲ್ಲಿ ಮದುವೆ ಮಂಟಪ ನಿರ್ಮಾಣವಾಗಿದೆ. ಧಾರ್ಮಿಕ ದೇವಾಲಯ ಮಂಟಪದ ಅಂಗಳದಲ್ಲಿ ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಗಟ್ಟಿಮೇಳ ನೆರವೇರಲಿದೆ. ಗಣ್ಯಾತೀಗಣ್ಯರು ಮದುವೆಗೆ ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ದಂಪತಿಗಳಿಗೆ ಶುಭಹಾರೈಸಲಿದ್ದಾರೆ.

Key words: Actor, Dolly Dhananjay, wedding, celebrations, Mysore