Sunday, September 20, 2026

BDA Apartments

ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ ” ಭೂಚಕ್ರ”…! BDA JK_Adv BDA...
Home Crime ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ ” ಭೂಚಕ್ರ”…!

ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ ” ಭೂಚಕ್ರ”…!

ಮೈಸೂರು,ಜನವರಿ,28,2025 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ನಡೆಸಿದ್ದು,  ಹೈಕೋರ್ಟ್ ಗೆ ವರದಿ ಸಲ್ಲಿಕೆಯಾಗಿದೆ. ಈ ಮಧ್ಯೆ ಇದೀಗ ಜೆಡಿಎಸ್​​ ಶಾಸಕ ಜಿಟಿ ದೇವೇಗೌಡ ವಿರುದ್ಧವೂ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸ್ನೇಹಮಯಿ‌ಕೃಷ್ಣ ದೂರು ನೀಡಿದ್ದಾರೆ.ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ " ಭೂಚಕ್ರ"...! nypunya1

ಈ ಸಂಬಂಧ ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮೈಸೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಶಾಸಕ ಜಿಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ.

ಶಾಸಕ ಜಿ.ಟಿ ದೇವೇಗೌಡರ ಕುಟುಂಬ ಸರ್ವೇ ನಂ 81/2 ರಲ್ಲಿ 2.22 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲ ಎಂದು 19 ನಿವೇಶನ ಪಡೆದಿದ್ದು, ಈ ಮೂಲಕ ಶಾಸಕ ಜಿಟಿ ದೇವೇಗೌಡರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗೆಯೇ ಮಾಲೀಕನ ಮನೆಗೆ ತೆರಳಿ ಮಾತುಕತೆ ನಡೆಸಿರುವ ಫೋಟೋವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.justkannada gtd

ದೂರು ಸಲ್ಲಿಕೆ ಬಳಿಕ ಮಾತನಾಡಿರುವ ಸ್ನೇಹಮಯಿ ಕೃಷ್ಣ, ಬೇನಾಮಿ ಹೆಸರಿನಲ್ಲಿ ಕೆಲವು ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಸೈಟ್ ಗಳನ್ನ ಪಡೆದಿದ್ದಾರೆ. ಈ ಸಂಬಂಧ ಕೆಲವು ದಾಖಲೆಗಳನ್ನು  ಲೊಕಾಯುಕ್ತ ಕಚೇರಿಗೆ ನೀಡಿದ್ದೇನೆ. ಶಾಸಕ ಜಿಟಿ ದೇವೇಗೌಡರಿಂದ ಅಧಿಕಾರ ದುರ್ಬಳಕೆಯಾಗಿದೆ. ಜಿಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ  ಅವರು  ದೇವನೂರು ಸರ್ವೆ ನಂಬರ್ ನಲ್ಲಿ 81/02 ರಲ್ಲಿ 2.22 ಎಕರೆ ಜಮೀನನ್ನು ಖರೀದಿಸಿದ್ದರು. ಸದರಿ ಜಮೀನಿಗೆ ಪರಿಹಾರ ನೀಡಿಲ್ಲ ಎಂದು  50:50  ಅನುಪಾತದಲ್ಲಿ ಅಕ್ರಮವಾಗಿ ಸುಮಾರು 19 ನಿವೇಶನಗಳನ್ನು ಪಡೆಯಲು  ಮಾಲೀಕರ ಮನೆಗೆ ಭೇಟಿ ನೀಡಿದ್ದಾರೆ. ಮನೆಗೆ  ಭೇಟಿ ನೀಡಿರುವ ಫೋಟೋಗಳನ್ನು ನೀಡಿದ್ದೇನೆ. ಜಿಟಿ ದೇವೇಗೌಡರ ಸಹೋದರಿ ಮಗ ಮಹೇಂದ್ರ ರವರ ಹೆಸರಲ್ಲಿ 50:50 ಸೈಟ್ ಪಡೆದಿದ್ದಾರೆ. ಅಕ್ರಮವಾಗಿ ನಿವೇಶನ ಪಡೆದಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದ್ದೇನೆ ಎಂದು ತಿಳಿಸಿದ್ದಾರೆ.

Key words: Muda scam, Snehamayi Krishna, Lokayukta,  JDS MLA, son