Sunday, August 16, 2026

BDA Apartments

Home Crime ಹಾಸನ : ಲೋಕಾಯುಕ್ತ ಬಲೆಗೆ ಡಿಡಿಪಿಐ ಪಾಂಡು.

ಹಾಸನ : ಲೋಕಾಯುಕ್ತ ಬಲೆಗೆ ಡಿಡಿಪಿಐ ಪಾಂಡು.

ಹಾಸನ,ಜನವರಿ,4,2025 (www.justkannada.in): ಶಿಕ್ಷಕಿ ವರ್ಗಾವಣೆಗೆ ಲಂಚ ಸ್ವೀಕರಿಸುತ್ತಿದ್ದ  ವೇಳೆ ಡಿಡಿಪಿಐ ಎಸ್.ಕೆ. ಪಾಂಡು ಹಾಗೂ ಕಚೇರಿ ಅಧೀಕ್ಷಕ ಎ.ಎಸ್. ವೇಣುಗೋಪಾಲ್‌ರಾವ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಡಿಡಿಪಿಐ ಪಾಂಡು ಅವರು ಎ.ಎಸ್. ವೇಣುಗೋಪಾಲ್‌ರಾವ್ ಮೂಲಕ ಶಿಕ್ಷಕಿಯ ವರ್ಗಾವಣೆಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಿಕ್ಷಕಿಯ ಪತಿ ಅಭಿಜಿತ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.  ದೂರು ಆಧರಿಸಿ ಲೋಕಾಯುಕ್ತ ಇನ್ಸ್‌ ಪೆಕ್ಟರ್‌ ಗಳಾದ ಬಾಲು ಮತ್ತು ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ, 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಪಾಂಡು ಹಾಗೂ ವೇಣುಗೋಪಾಲ್‌ರಾವ್ ಅವರನ್ನು ಹಣದ ಸಮೇತ ವಶಕ್ಕೆ ಪಡೆದಿದೆ.

Key words: Hassan, DDPI, Lokayukta, trap