Saturday, August 8, 2026

BDA Apartments

Home Crime ಪತಿಯನ್ನೇ ಕೊಂದು 2 ತುಂಡು ಮಾಡಿದ ಪತ್ನಿಯ ಬಂಧನ !

ಪತಿಯನ್ನೇ ಕೊಂದು 2 ತುಂಡು ಮಾಡಿದ ಪತ್ನಿಯ ಬಂಧನ !

ಬೆಳಗಾವಿ,ಜನವರಿ,2,2025 (www.justkannada.in): ಮಗಳ ಮೇಲೆ ಎರಗಲು ಯತ್ನಿಸಿದ ಪತಿಯನ್ನೇ ಪತ್ನಿ ಕೊಂದು 2 ತುಂಡುಗಳಾಗಿ ಮಾಡಿ ಬಳಿಕ ಶವ  ಭಾವಿಗೆ ಎಸೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀಮಂತ ಇಟ್ನಾಳೆ ಕೊಲೆಯಾದ ಪತಿ. ಪತ್ನಿ ಸಾವಿತ್ರಿ ಕೊಲೆ ಮಾಡಿದ ಮಹಿಳೆ

ಪತ್ನಿಯನ್ನ ಶ್ರೀಮಂತ ಇಟ್ನಾಳೆ ಸರಸಕ್ಕೆ ಕರೆದಿದ್ದು ಪತ್ನಿ ಬಾರದೇ ಇದ್ದಾಗ ಶ್ರೀಮಂತ ಇಟ್ನಾಳ್ ತನ್ನ ಪುತ್ರಿಯ ಮೇಲೆಯೇ ಎರಗಲು ಬಂದಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಸಾವಿತ್ರಿ ಶ್ರೀಮಂತ ಇಟ್ನಾಳ್ ನನ್ನು ಕಲ್ಲು ಎತ್ತಿಹಾಕಿ ಕೊಂದು ಪತಿಯ ಶವವನ್ನು 2 ಭಾಗ ಮಾಡಿ ಗದ್ದೆಗೆ ಸಾಗಿಸಿದ್ದಾಳೆ.

ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಎಂದು ದೇಹವನ್ನು 2 ತುಂಡು ಬಾಡಿ ಬ್ಯಾರೆ‍ಲ್ ನಲ್ಲಿ ಸಾಗಿಸಿದ್ದಳು. ನಂತರ ಗದ್ದೆಯಲ್ಲಿ ಶವವನ್ನು ಹಾಗೆಯೇ ಜೋಡಿಸಿಟ್ಟು ಹೂತು ಹಾಕಿದ್ದಾಳೆ. ನಂತರ ಬಾವಿಗೆ ಎಸೆದಿದ್ದಾಳೆ ಎನ್ನಲಾಗಿದೆ.

ಈ ನಡುವೆ ಸಾವಿತ್ರಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು ಬಳಿಕ ಆರೋಪಿ ಸಾವಿತ್ರಿ ತಪ್ಪೊಪ್ಪಿಕೊಂಡಿದ್ದಾಳೆ.

Key words: Wife ,arrested, killing , husband