Saturday, September 5, 2026

BDA Apartments

Home Front Page 2024ರ ಕ್ಯಾಲೆಂಡರ್ ನಲ್ಲಿ ಪೇಪರ್ ಬ್ಯಾಗ್ ತಯಾರಿಕೆ:  ಆರ್ಟ್ ಆಫ್ ಲಿವಿಂಗ್ ಮಕ್ಕಳಿಂದ ಜಾಗೃತಿ

2024ರ ಕ್ಯಾಲೆಂಡರ್ ನಲ್ಲಿ ಪೇಪರ್ ಬ್ಯಾಗ್ ತಯಾರಿಕೆ:  ಆರ್ಟ್ ಆಫ್ ಲಿವಿಂಗ್ ಮಕ್ಕಳಿಂದ ಜಾಗೃತಿ

ಮೈಸೂರು,ಡಿಸೆಂಬರ್,31,2024 (www.justkannada.in): ಆರ್ಟ್ ಆಫ್ ಲಿವಿಂಗ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ನಂಜು ಮಳಿಗೆ ಮಾರ್ಕೆಟ್ ಸುತ್ತಮುತ್ತ 2024ರ ಕ್ಯಾಲೆಂಡರ್ ನಲ್ಲಿ ಆರ್ಟ್ ಆಫ್ ಲಿವಿಂಗ್ ಮಕ್ಕಳೇ ಪೇಪರ್ ಬ್ಯಾಗನ್ನು ಸ್ವಯಂ ಸಿದ್ಧಪಡಿಸಿ ಪ್ಲಾಸ್ಟಿಕ್ ನಿಂದ ಆಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು.

ಪ್ಲಾಸ್ಟಿಕ್ ಬೇಡ ಪೇಪರ್ ಬ್ಯಾಗ್ ಬಟ್ಟೆ ಬ್ಯಾಗ್ ಬಳಸಿ ಎಂದು ಘೋಷಣೆ ಕೂಗಿ ಗ್ರಾಹಕರಿಗೆ ಪೇಪರ್ ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ನಗರಪಾಲಿಕ ಸದಸ್ಯ ಮಾ. ವಿ ರಾಮ್ ಪ್ರಸಾದ್ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಮಕ್ಕಳು ಪೇಪರ್ ಬ್ಯಾಗನ್ನು ಸ್ವಯಂ ಪ್ರೇರಿತ ತಯಾರಿಸಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಅತ್ಯುತ್ತಮ ಕೆಲಸ.  2024ರ ನಿಮ್ಮ ಮನೆಯ ಹಳೇ ಕ್ಯಾಲೆಂಡರ್ ಹಾಗೂ ದಿನಪತ್ರಿಕೆಗಳನ್ನು ಬೀಸಾಡದೇ ಈ ರೀತಿ ಬಳಕೆ ಮಾಡುವ ಮೂಲಕ  ನಿಮ್ಮ ಸುತ್ತಮುತ್ತ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಪ್ರತಿ ಮೊಹಲ್ಲಾದಲ್ಲೂ ನಗರ ಪಾಲಿಕೆ ವತಿಯಿಂದ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಲಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಂ ಡಿ ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಹಿರಿಯ ಪತ್ರಕರ್ತ ಅನಿಲ್ ಕುಮಾರ್, ಆರೋಗ್ಯ ನಿರೀಕ್ಷಕರು ಶಿವಪ್ರಸಾದ್, ಶಂಕರ್, ಶಿವಲಿಂಗ ಸ್ವಾಮಿ, ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ನಂದಿನಿ, ವಿವೇಕ್, ಹಾಗೂ ಆರ್ಟ್ ಆಫ್ ಲಿವಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Paper bag, 2024 calendar, Art of Living ,children, awareness