Tuesday, August 4, 2026

BDA Apartments

Home Front Page ಅದಾನಿ ಕೇಸ್  ಮುಚ್ಚಿ ಹಾಕಲು ‘ಒನ್ ನೇಷನ್ ಒನ್ ಎಲೆಕ್ಷನ್’ ಮುನ್ನಲೆಗೆ – ಸಚಿವ ಸಂತೋಷ್...

ಅದಾನಿ ಕೇಸ್  ಮುಚ್ಚಿ ಹಾಕಲು ‘ಒನ್ ನೇಷನ್ ಒನ್ ಎಲೆಕ್ಷನ್’ ಮುನ್ನಲೆಗೆ – ಸಚಿವ ಸಂತೋಷ್ ಲಾಡ್

ಬೆಳಗಾವಿ,ಡಿಸೆಂಬರ್,18,2024 (www.justkannada.in):  ಅದಾನಿ ಕೇಸ್  ಮುಚ್ಚಿ ಹಾಕಲು ‘ಒನ್ ನೇಷನ್ ಒನ್ ಎಲೆಕ್ಷನ್’ ಮುನ್ನಲೆಗೆ ತಂದಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದರು.

ಸರ್ಕಾರ ಕೇವಲ ಹಗರಣಗಳನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡಿದೆ. ಚಳಿಗಾಲದ ಅಧಿವೇಶನ  ತೃಪ್ತಿ ತಂದಿಲ್ಲ ಎಂಬ ವಿರೋಧ ಪಕ್ಷದವರ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಗ್ಯಾರಂಟಿ ಅನುಷ್ಠಾನವೂ ಒಂದು ಸಾಧನೆ. 56000 ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗೆ ನೀಡಲಾಗಿದೆ. ಏನೇ ಇದ್ದರೂ ವಿರೋಧ ಪಕ್ಷಗಳ ಪ್ರಶ್ನೆಗೆ ಸರ್ಕಾರ ಉತ್ತರ ಕೊಡಲಿದೆ. 1.26 ಲಕ್ಷ ಕೋಟಿ  ರೂಪಾಯಿ ಅಭಿವೃದ್ಧಿಗೆ ಇಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಭದ್ಧವಾಗಿದೆ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ  ಎಷ್ಟು ಹಣ ನೀಡಿದ್ದರು. ಈಗ ಅದಾನಿ ಕೇಸ್ ಮುಚ್ಚಿ ಹಾಕಲು  ಒನ್ ನೇಷನ್ ಒನ್ ಎಲೆಕ್ಷನ್ ಮುನ್ನಲೆಗೆ ತಂದಿದ್ದಾರೆ ಯು ಎಸ್ ಕೋರ್ಟ್  ಅದಾನಿ ಬಗ್ಗೆ ಹೇಳಿದ್ದೇನು? ಅದಾನಿ ಭ್ರಷ್ಟಾಚಾರ ಮಾಡಿದ್ದು ಎಲ್ಲಿ? ದೇಶದಲ್ಲಿ ಅದಾನಿ ಸಂಸ್ಥೆಗೆ ಏನೆಲ್ಲಾ ಕೊಡಲಾಗಿದೆ? ಭಾರತದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಯುಎಸ್ ಕೋರ್ಟ್ ಹೇಳಿದೆ. ಅದಾನಿ ಕೇಸ್ ಮುಚ್ಚಿಹಾಕಲು ಕೇಂದ್ರದ ಮೋದಿ ಸರ್ಕಾರ ಇನ್ ನೇಷನ್ ಒನ್ ಎಲೆಕ್ಷನ್ ತರಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

Key words: ‘One Nation One Election,  close ,Adani case, Minister, Santosh Lad