Wednesday, August 12, 2026

BDA Apartments

Home Crime ‘KEA’ ಸೀಟುಗಳ ಬ್ಲಾಕಿಂಗ್ ಹಗರಣ ; 10 ಮಂದಿ ಆರೋಪಿಗಳ ಬಂಧನ

‘KEA’ ಸೀಟುಗಳ ಬ್ಲಾಕಿಂಗ್ ಹಗರಣ ; 10 ಮಂದಿ ಆರೋಪಿಗಳ ಬಂಧನ

ಬೆಂಗಳೂರು,ಡಿಸೆಂಬರ್,3,2024 (www.justkannada.in):  ಕೆಇಎ ಸೀಟ್ ಗಳ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಗರಣದ ಕಿಂಗ್ ಪಿನ್ ಹರ್ಷ,  ರವಿಶಂಕರ್,  ಪುನೀತ್,  ಶಶಿಕುಮಾರ್,  ಪುರುಷೋತ್ತಮ್,  ಪ್ರಕಾಶ್ ಅವಿನಾಶ್ ಸೇರಿ 10 ಆರೋಪಿಗಳನ್ನು ಬಂಧಿಸಲಾಗಿದೆ.

ಕೆಇಎ ಆಡಳಿತಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಕೆಇಎ ನೌಕರ ಅವಿನಾಶ್ ಸೇರಿ 10 ಮಂದಿ ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಇಎ ನೌಕರ ಅವಿನಾಶ್ ಸಹಾಯದಿಂದ ಲಕ್ಷಾಂತರ ರೂ ಹಣಕ್ಕೆ ಸೀಟುಗಳನ್ನು ಅಕ್ರಮವಾಗಿ ಡೀಲ್ ಮಾಡುತ್ತಿದ್ದರು ಎನ್ನಲಾಗಿದೆ.

ಸೀಟ್ ಬ್ಲಾಕ್ ಮಾಡಿ ಕೋಟಿ ಕೋಟಿ ಹಣಕ್ಕೆ  ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಹಗರಣದಲ್ಲಿ ಪ್ರತಿಷ್ಟಿತ ಕಾಲೇಜುಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಮಲ್ಲೇಶ್ವರಂ ಠಾಣಾ ಪೊಲೀಸರು ಸದ್ಯ ಪ್ರಕರಣ ತನಿಖೆ ಮುಂದುವರೆಸಿದ್ದಾರೆ.

Key words: KEA, seat blocking, scam, 10 accused, arrested