Wednesday, July 29, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ಸೇಡಿನ ರಾಜಕಾರಣ ಸಲ್ಲದು- ಎಂ.ಕೆ.ಸೋಮಶೇಖರ್

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ಸೇಡಿನ ರಾಜಕಾರಣ ಸಲ್ಲದು- ಎಂ.ಕೆ.ಸೋಮಶೇಖರ್

ಮೈಸೂರು,ನವೆಂಬರ್,29,2024 (www.justkannada.in): ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ, ಜೆಡಿಎಸ್ ನ ಸೇಡಿನ ರಾಜಕಾರಣ ಸಲ್ಲದು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಿಡಿಕಾರಿದರು.

ಡಿಸೆಂಬರ್ 5 ರಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯನವರ ಸ್ವಾಭಿಮಾನಿ ಸಮಾವೇಶ ಹಿನ್ನೆಲೆಯಲ್ಲಿ ಇಂದು ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ” ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ  ಎಂ.ಕೆ ಸೋಮಶೇಖರ್ ಸಿದ್ದರಾಮಯ್ಯನವರ ರಾಜಕೀಯ ಜೀವನ ತೆರೆದ ಪುಸ್ತಕ. ಅವರ ಅಧಿಕಾರ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನಕಲ್ಯಾಣದ ಇತಿಹಾಸ ನಿರ್ಮಿಸಿದ್ದಾರೆ ಹೊರತು ಸ್ವಾರ್ಥವನ್ನು ಎಂದು ಮಾಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದಷ್ಟು ಜನೋಪಕಾರಿ ಕಾರ್ಯಕ್ರಮಗಳನ್ನು ಯಾರು ನೀಡಿಲ್ಲ. ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಆಡಳಿತ ನೀಡುತ್ತಿದ್ದಾರೆ.ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಶುದ್ಧ ಹಸ್ತರಾಗಿದ್ದಾರೆ.,ಇಡೀ ರಾಜ್ಯವೇ ಒಪ್ಪುವ ಸಿದ್ದರಾಮಯ್ಯನವರಂತಹ ದಕ್ಷ ಪ್ರಾಮಾಣಿಕ ರಾಜಕಾರಣಿಯ ಬೆಂಬಲಕ್ಕೆ ನಿಲ್ಲೋಣಾ.ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಹೆಚ್ಚು ಜನ ಸ್ವಾಭಿಮಾನಿ ಸಮಾವೇಶದಲ್ಲಿ ಭಾಗವಹಿಸೋಣಾ ಎಂದರು.

ಸಭೆಯಲ್ಲಿ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ನಗರಾಧ್ಯಕ್ಷ ಟಿ.ಎಸ್.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್ ,ಶ್ರೀಧರ್, ಮಾಜಿ ಮೇಯರ್ ಪುಷ್ಪಲತಾ, ಟಿ.ಬಿ.ಚಿಕ್ಕಣ್ಣ,ಬಿ.ಎಲ್.ಭೈರಪ್ಪ,ಮಾಜಿ ಉಪಮಹಾಪೌರ ಸಿದ್ದರಾಜು ಸೇರಿ ಮತ್ತಿತರರು ಉಪಸ್ಥಿತರಿದ್ದರು.

Key words: BJP, JDS, politics, revenge, CM Siddaramaiah, unacceptable, M.K. Somashekar