Sunday, August 23, 2026

BDA Apartments

Home Front Page ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಗೆ ಮುಹಮ್ಮದ್ ಅಝರುದ್ದೀನ್ ಅಧ್ಯಕ್ಷ

ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಗೆ ಮುಹಮ್ಮದ್ ಅಝರುದ್ದೀನ್ ಅಧ್ಯಕ್ಷ

ಹೈದರಾಬಾದ್, ಸೆಪ್ಟೆಂಬರ್ 28, 2019 (www.justkannada.in): ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿ ಕ್ರಿಕೆಟ್ ಆಡುವುದರಿಂದ ಆಜೀವ ನಿಷೇಧಕ್ಕೆ ಒಳಗಾಗಿದ್ದ ಅಝರ್ ಜೀವನ ಚಕ್ರ ಒಂದು ಸುತ್ತು ಬಂದಿದೆ.

ಮಾಜಿ ಆಕರ್ಷಕ ಬ್ಯಾಟ್ಸ್‌ಮನ್ ಅಝರ್‌ಗೆ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ 173 ಮತಗಳು ಲಭಿಸಿವೆ. ಅವರ ಎದುರಾಳಿ ಪ್ರಕಾಶ್‌ಚಂದ್ರ ಜೈನ್‌ಗೆ 73 ಮತಗಳು ಲಭಿಸಿದ್ದವು. ಅಝರ್ ಅವರ ಸಮಿತಿ ಸ್ಪರ್ಧೆಯಲ್ಲಿ ಜಯ ಸಾಧಿಸಿದೆ.