Thursday, August 13, 2026

BDA Apartments

Home Crime ಹೇರ್ ಡ್ರೈಯರ್ ಸ್ಪೋಟ: ಮೃತ ಯೋಧನ ಪತ್ನಿಯ ಬೆರಳುಗಳು ಛಿದ್ರ ಛಿದ್ರ..!

ಹೇರ್ ಡ್ರೈಯರ್ ಸ್ಪೋಟ: ಮೃತ ಯೋಧನ ಪತ್ನಿಯ ಬೆರಳುಗಳು ಛಿದ್ರ ಛಿದ್ರ..!

ಬಾಗಲಕೋಟೆ ,ನವೆಂಬರ್,20,2024 (www.justkannada.in): ಕೊರಿಯರ್ ನಲ್ಲಿ ಬಂದಿದ್ದ ಹೇರ್ ಡ್ರೈಯರ್ ಓಪನ್ ಮಾಡಿ ಸ್ವಿಚ್ ಆನ್ ಮಾಡಿದ ತಕ್ಷಣ ಹೇರ್ ಡ್ರೈಯರ್ ಸ್ಪೋಟಗೊಂಡು ಮೃತ ಯೋಧನ ಪತ್ನಿ ಬೆರಳುಗಳು ಕಟ್ ಆಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.  ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಅವರಿಗೆ ಗಂಭೀರ ಗಾಯಗಳಾಗಿದೆ. ಶಶಿಕಲಾ ಹೆಸರಲ್ಲಿ ಬಂದಿದ್ದ ಕೊರಿಯರ್ ಪಾರ್ಸಲ್ ಓಪನ್ ಮಾಡಿ ಹೇರ್ ಡ್ರೈಯರ್ ಸ್ವಿಚ್ ಆನ್ ಮಾಡಿದ ಬೆನ್ನಲ್ಲೆ ಅದು ಸ್ಪೋಟಗೊಂಡಿದ್ದು ಈ ವೇಳೆ ಬಸಮ್ಮ ಅವರ ಎರಡೂ ಹಸ್ತದ ಬೆರಳುಗಳು ಮುಂಗೈ ಕಟ್  ಆಗಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಬಸಮ್ಮರನ್ನ ಇಳಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯೋಧ ಪಾಪಣ್ಣ ಅವರು 2017ರಲ್ಲಿ ಜಮ್ಮುಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟಿದ್ದರು.

ಇನ್ನು ಘಟನೆ ಕುರಿತು ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Hair dryer, explosion, women, fingers, shattered