Thursday, October 8, 2026

BDA Apartments

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಕರೆಕ್ಟ್: ನಟ ಜಗ್ಗೇಶ್ BDA JK_Adv BDA Adv
Home Front Page ನಿಖಿಲ್ ಕುಮಾರಸ್ವಾಮಿ ಭವಿಷ್ಯದ ಮುಖ್ಯಮಂತ್ರಿ ಎಂದ್ರು ಎಂಎಲ್ ಸಿ

ನಿಖಿಲ್ ಕುಮಾರಸ್ವಾಮಿ ಭವಿಷ್ಯದ ಮುಖ್ಯಮಂತ್ರಿ ಎಂದ್ರು ಎಂಎಲ್ ಸಿ

ನಿಖಿಲ್ ಕುಮಾರಸ್ವಾಮಿ ಭವಿಷ್ಯದ ಮುಖ್ಯಮಂತ್ರಿ ಎಂದ್ರು ಎಂಎಲ್ ಸಿ puliyogare,ayyangar WhatsA...

ಮೈಸೂರು,ನವೆಂಬರ್,18,2024 (www.justkannada.in): ನಿಖಿಲ್ ಕುಮಾರಸ್ವಾಮಿ ಈ ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ಎಂದು   ವಿಧಾನ ಪರಿಷತ್ ಸದಸ್ಯ ಡಾ. ಸಿ ಎನ್ ಮಂಜೇಗೌಡ  ಹೇಳಿಕೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಸಿ.ಎನ್ ಮಂಜೇಗೌಡ,  ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ 15 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಕುಮಾರಣ್ಣ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದು ಸಿಎಂ ಆಗಿದ್ದರು. ಸಿಎಂ ಆಗಿದ್ದ ವೇಳೆ ಚನ್ನಪಟ್ಟಣ ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ದಾರೆ. ಚನ್ನಪಟ್ಟಣ ನೀರಾವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕೊಡುಗೆ ಇದೆ. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಿದ್ದು ಕುಮಾರಸ್ವಾಮಿ. ಇದೆಲ್ಲವೂ ನಿಖಿಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಮೀರ್ ಅಹಮ್ಮದ್ ಹೇಳಿದ್ದು ಕೂಡ ನಮಗೆ ಪ್ಲಸ್ ಆಗಿದೆ ಎಂದು ತಿಳಿಸಿದರು.ನಿಖಿಲ್ ಕುಮಾರಸ್ವಾಮಿ ಭವಿಷ್ಯದ ಮುಖ್ಯಮಂತ್ರಿ ಎಂದ್ರು ಎಂಎಲ್ ಸಿ cn manjegowda

ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರ ವೇಳೆ ದೇವೇಗೌಡರು, ಕುಮಾರಸ್ವಾಮಿ ವಿರುದ್ಧ ಹಲವು ಹೇಳಿಕೆ ನೀಡಿದರು. ಈಗ ಅವರೇ ಈ ರೀತಿಯಾದ ಹೇಳಿಕೆ ನೀಡಬಾರದಿತ್ತು ಎಂದು ಹೇಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಯುವಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ಹೊತ್ತು ಸಾಗಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಭವಿಷ್ಯದ ಮುಖ್ಯಮಂತ್ರಿ ಎಂದು ಡಾ.ಸಿ. ಎನ್ ಮಂಜೇಗೌಡ ತಿಳಿಸಿದರು.

Key words: Nikhil Kumaraswamy, future CM, MLC