Sunday, August 9, 2026

BDA Apartments

Home Front Page ಕೋವಿಡ್ ಹಗರಣ ತನಿಖೆಗೆ ಎಸ್ ಐಟಿ ರಚನೆ: ಸರ್ಕಾರದ ವಿರುದ್ದ ಮಾಜಿ ಸಿಎಂ ಬಿಎಸ್ ವೈ...

ಕೋವಿಡ್ ಹಗರಣ ತನಿಖೆಗೆ ಎಸ್ ಐಟಿ ರಚನೆ: ಸರ್ಕಾರದ ವಿರುದ್ದ ಮಾಜಿ ಸಿಎಂ ಬಿಎಸ್ ವೈ ಆಕ್ರೋಶ

ಶಿವಮೊಗ್ಗ,ನವೆಂಬರ್,16,2024 (www.justkannada.in): ಕೋವಿಡ್ ಹಗರಣದ ತನಿಖೆಗೆ ಎಸ್ ಐಟಿ ರಚನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಸರ್ಕಾರ  ದುರುದ್ದೇಶದಿಂದ ಎಸ್ ಐಟಿ ರಚನೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ನಾವು ಎಲ್ಲಾ ರೀತಿಯ ತನಿಖೆ ಎದುರಿಸಿ ಹೊರಬರುತ್ತೇವೆ. ಜನರನ್ನ ಡೈವರ್ಟ್ ಮಾಡಲು ಕೋವಿಡ್ ಹಗರಣ ಆರೋಪ ಮಾಡಿದ್ದಾರೆ. ನಾವು ಎಲ್ಲಾ ರೀತಿಯ ತನಿಖೆಗೆ ಸಿದ್ದ ಎಂದರು.

ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂ. ಆಫರ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ,  ಸರ್ಕಾರ ಬೀಳಿಸುವ ಕೆಲಸ ಯಾರು ಮಾಡುತ್ತಿಲ್ಲ. ಕಾಂಗ್ರೆಸ್ ಶಾಸಕರನ್ನ ಯಾರೂ ಕರೆಯುತ್ತಿಲ್ಲ. ಹಾಗೆಯೇ ಬಿಜೆಪಿ ಶಾಸಕರನ್ನೂ ಯಾರನ್ನೂ ಕರೆಯುತ್ತಿಲ್ಲ ಎಂದರು.

Key words: Formation, SIT, Covid scam, Former CM, BSY