Saturday, August 8, 2026

BDA Apartments

Home Front Page ಗ್ಯಾರಂಟಿಗೆ ಹಣ ಹೊಂದಿಸಲಾಗದೆ 11 ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದು- ಶಾಸಕ ಸುನೀಲ್ ಕುಮಾರ್

ಗ್ಯಾರಂಟಿಗೆ ಹಣ ಹೊಂದಿಸಲಾಗದೆ 11 ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದು- ಶಾಸಕ ಸುನೀಲ್ ಕುಮಾರ್

ಹಾಸನ,ನವೆಂಬರ್,16,2024 (www.justkannada.in): ಗ್ಯಾರಂಟಿ ಯೋಜನೆಗಳಿಗೆ  ಹಣ ಹೊಂದಿಸಲಾಗದೆ ರಾಜ್ಯ ಸರ್ಕಾರ 11 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ ಎಂದು ಬಿಜೆಪಿ  ಶಾಸಕ ಸುನೀಲ್ ಕುಮಾರ್ ಆರೋಪ ಮಾಡಿದರು.

ಇಂದು ಹಾಸನದಲ್ಲಿ ಮಾತನಾಡಿದ ಶಾಸಕ ಸುನೀಲ್ ಕುಮಾರ್,  ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಆಗದೆ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡುತ್ತಿದೆ.  ಈಗಾಗಲೇ 11 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿದೆ ಇದರಿಂದ ಜನರು ಯೋಜನೆಗಳಿಂದ ವಂಚಿತರಾಗುತ್ತಾರೆ. ಕೇಂದ್ರ ರಾಜ್ಯದ ಕೆಲ ಯೋಜನೆಗಳಿಂದ ಜನರು ವಂಚಿತರಾಗಿದ್ದಾರೆ.  ಸರ್ಕಾರ ಬಡವರ ಪರ  ಎಂದು ಭಾಷಣ ಮಾಡುತ್ತದೆ ಇಷ್ಟು ಕಾರ್ಡ್ ಗಳನ್ನ ರದ್ದುಗೊಳಿಸಿದ ಉದಹಾರಣೆಯೇ ಇಲ್ಲ ಈ ಬಗ್ಗೆ ಕೂಡ ನಾವು ಹೋರಾಟ ಮಾಡುತ್ತೇವೆ  ಎಂದರು.

3 ವಿಧಾನಸಭಾ ಕ್ಷೇತ್ರಗಳಲ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತೆ. ಫಳಿತಾಂಶ ಬಂದ ಬಳಿಕ  ಸಿಎಂ ಕೆಳಗಿಳಿಯುತ್ತಾರೆ. ಹೀಗಾಗಿ ಗೊತ್ತಾಗಿಯೇ ಹೈಕಮಾಂಡ್ ಗೆ  ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ ಎಂದು ಶಾಸಕ ಸುನೀಲ್ ಕುಮಾರ್  ಲೇವಡಿ ಮಾಡಿದರು.

Key words: 11 lakh, BPL cards, canceled, guarantee, MLA , Sunil Kumar