Wednesday, August 12, 2026

BDA Apartments

Home Front Page ಪ್ರಧಾನಿ ಮೋದಿ ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಹೇಳಿಕೆ ನೀಡಿದ್ದಾರೆ- ಗೃಹ ಸಚಿವ ಪರಮೇಶ್ವರ್ ಕಿಡಿ

ಪ್ರಧಾನಿ ಮೋದಿ ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಹೇಳಿಕೆ ನೀಡಿದ್ದಾರೆ- ಗೃಹ ಸಚಿವ ಪರಮೇಶ್ವರ್ ಕಿಡಿ

ಬೆಂಗಳೂರು,ನವೆಂಬರ್,11,2024 (www.justkannada.in): ಮಹಾರಾಷ್ಟ್ರ ಚುನಾವಣಾ ವೆಚ್ಚಕ್ಕಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಣ ವಸೂಲಿ ಮಾಡಿದೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಬಿಜೆಪಿ ಮುಖಂಡರು ಹೇಳಿದ್ದರೆ ಬಿಡಿ ಅನ್ನಬಹುದಿತ್ತು. ಆದರೆ ದೇಶದ ಪ್ರಧಾನಮಂತ್ರಿಗಳು ಈ ರೀತಿ ಹೇಳಿದ್ದಾರೆ.  ಮೋದಿ ಸತ್ಯಕ್ಕೆ  ದೂರವಾದ ಮಾತುಗಳನ್ನ ಹೇಳಿದ್ದಾರೆ.  ಮೋದಿ ಬಳಿ ಯಾವ ಪುರಾವೆ ಇದೆಯೋ ಗೊತ್ತಿಲ್ಲ ಮಹಾರಾಷ್ಟ್ರದಲ್ಲಿ  ನಮ್ಮ ಪಕ್ಷ ಇದೆ. ಅಲ್ಲಿನ ಕಾಂಗ್ರೆಸ್ ನಾಯಕರು ಚುನಾವಣೆ ನೋಡಿಕೊಳ್ಳುತ್ತಾರ ನಾವು ಇಲ್ಲಿಂದ ಹಣ ಕಳಿಸುವ ಅವಶ್ಯಕತೆ ಇಲ್ಲ ಮೋದಿ ಮಾತಿಗೆ ಏನು ಹೇಳಬೇಕೋ ಗೊತ್ತಿಲ್ಲ. ಮೋದಿ ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ ಎಂದು ಗುಡುಗಿದರು.

ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ಎಲ್ಲಾ ನಾಯಕರು ಪ್ರಚಾರ ಮಾಡುತ್ತಿದ್ದಾರೆ ಸರ್ಕಾರದ ಸಾಧನೆ ಕಾರ್ಯಕ್ರಮ ಮುಂದಿಟ್ಟು ಪ್ರಚಾರ ಮಾಡಲಾಗುತ್ತಿದೆ. ಎರಡೂ ಪಕ್ಷಗಳಿಂದ ಅನವಶ್ಯಕ ಮಾತುಗಳು ಬರ್ತಿವೆ. ಇವರ ಮಾತನ್ನು ಕ್ಷೇತ್ರದ ಮತದಾರರು ಗಮನಿಸಿದ್ದಾರೆ ಇವತ್ತಿಗೆ ಬೈದಾಡೋದು ಕೂಡ ಮುಗಿದು ಹೋತ್ತೆ. ಎಲ್ಲಾ ಗಮನಿಸಿದರೆ ಕಾಂಗ್ರೆಸ್ ಮೂರು ಕಡೆ ಗೆಲ್ಲುತ್ತೆ ಎಂದು ತಿಳಿಸಿದರು.

Key words: PM Modi, responsibility, false statement, Minister, Parameshwar