Saturday, August 8, 2026

BDA Apartments

Home Front Page ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸವಾಲು ಹಾಕಿದ ಬಿಜೆಪಿ ಶಾಸಕ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸವಾಲು ಹಾಕಿದ ಬಿಜೆಪಿ ಶಾಸಕ

ಬೆಂಗಳೂರು,ನವೆಂಬರ್,9,2024 (www.justkannada.in): ಕಳೆದ ಲೋಕಸಭೆ ಚುನಾವಣೆಯಲ್ಲಿ ಯಶವಂತಪುರದಲ್ಲಿ ತಮ್ಮ ಪಕ್ಷದ ಶಾಸಕ ಎಸ್ ಟಿ ಸೋಮಶೇಖರ್ ಕೆಲಸ ಮಾಡಿದ್ದರೂ ನನಗೆ ಲೀಡ್ ಬಂದಿದೆ ಎಂದು ಹೇಳಿಕೆ ನೀಡಿದ್ದ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸ್ವಪಕ್ಷದ ಶಾಸಕ ಎಸ್ ಟಿ ಸೋಮಶೇಖರ್ ಸವಾಲು ಹಾಕಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಸೋಮಶೇಖರ್,  ಶೋಭಾ ಕರಂದ್ಲಾಜೆಗೆ ನನ್ನ ತಾಕತ್ತಿನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ.  ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ನಾನೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಬ್ಬರೂ ಯಶವಂತಪುರದಿಂಧ ಸ್ಪರ್ಧೆ ಮಾಡೋಣ . ಆಗ ಯಾರ ತಾಕತ್ತು ಎಷ್ಟಿದೆ ಎಂಬುದು ತಿಳಿಯಲಿದೆ ಎಂದು ಸವಾಲೆಸೆದರು.

ಚಿಕ್ಕಮಗಳೂರಿನಲ್ಲಿ ಜನರು ಉಗುಳಿದ್ದಕ್ಕೆ ಯಶವಂತಪುರಕ್ಕೆ ಬಂದಿದ್ದಾರೆ. ನಾನು ಅವರ ಹಾಗೆ ಕ್ಷೇತ್ರ ಬಿಟ್ಟು ಬೇರೊಂದು ಕ್ಷೇತ್ರಕ್ಕೆ ಓಡಿಹೋಗಿ ನಿಲ್ಲಲ್ಲ. ಶೋಭಾ ಕರಂದ್ಲಾಜೆ ಮುಖ ನೋಡಿ ಯಾರೂ ವೋಟ್ ಹಾಕಿಲ್ಲ. ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಮಾಡಿದ್ದು ಏನು? ಸುಮ್ಮನೆ ಅವರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದಿಂದ ಆಗಬೇಕಿರುವ ಕೆಲಸವನ್ನಾದರೂ ಮಾಡಲಿ. ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ತರಿಸಲಿ ಎಂದು ಎಸ್ ಟಿ ಸೋಮಶೇಖರ್ ಟಾಂಗ್ ಕೊಟ್ಟರು.

Key words: BJP MLA, challenged, Union Minister, Shobha Karandlaje