Wednesday, October 7, 2026

BDA Apartments

immense respect BDA JK_Adv BDA Adv
Home Front Page ಕಾಂಗ್ರೆಸ್ ಕೊಟ್ಟಂತಹ ಕಾರ್ಯಕ್ರಮಗಳಲ್ಲಿ ಒಂದನಾದ್ರೂ ನೀವು ನೀಡಿದ್ದೀರಾ ? ಹೆಚ್ ಡಿಡಿ ಮತ್ತು ಹೆಚ್ ಡಿಕೆಗೆ...

ಕಾಂಗ್ರೆಸ್ ಕೊಟ್ಟಂತಹ ಕಾರ್ಯಕ್ರಮಗಳಲ್ಲಿ ಒಂದನಾದ್ರೂ ನೀವು ನೀಡಿದ್ದೀರಾ ? ಹೆಚ್ ಡಿಡಿ ಮತ್ತು ಹೆಚ್ ಡಿಕೆಗೆ ಡಿಕೆ ಶಿವಕುಮಾರ್ ಟಾಂಗ್

ರಾಮನಗರ,ನವೆಂಬರ್,8,2024 (www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಲವು ಯೋಜನೆ ಕಾರ್ಯಕ್ರಮಗಳನ್ನ ನೀಡಿದೆ. ನಾವು ಕೊಟ್ಟಂತಹ ಒಂದೇ ಒಂದು ಕಾರ್ಯಕ್ರಮವನ್ನು ನೀವು ಮಾಡಿದ್ದಾರಾ ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಕೇಳಲು ಬಯಸುತ್ತೇನೆ. ಇಂತಹ ಕಾರ್ಯಕ್ರಮವನ್ನು ಕೊಟ್ಟಿದ್ದೇವೆ ಎಂದು ಅವರು ಹೇಳಿದರೇ ಈ ಕೂಡಲೇ ನಾನು ಈ ಚುನಾವಣಾ ಪ್ರಚಾರ ನಿಲ್ಲಿಸಿ ಇಲ್ಲಿಂದ ಹೊರಟುಹೋಗುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.

ಇಂದು ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ದೇವರಾಜ ಅರಸು, ಎಸ್.ಎಂ ಕೃಷ್ಣ, ವಿರೇಂದ್ರ ಪಾಟೀಲ್, ಸಿದ್ದರಾಮಯ್ಯ, ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದವರು. ಇವರ ಜತೆಗೆ ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಯೋಜನೆ ಕೊಟ್ಟರು. ಇಂದಿರಾ ಗಾಂಧಿ ಅವರು ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಯೋಜನೆ ಜಾರಿ, ನಿವೇಶನ, ವಸತಿ ನೀಡುವ ಯೋಜನೆ ತಂದರು. ವಿರೇಂದ್ರ ಪಾಟೀಲ್ ಅವರ ಕಾಲದಲ್ಲಿ ಬಗರ್ ಹುಕುಂ ಸಾಗುವಳಿ ಅವಕಾಶ ನೀಡಿದರು. ಬಂಗಾರಪ್ಪನವರ ಕಾಲದಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಯಿತು. ನಾನು ಇಂಧಿನ ಸಚಿವನಾಗಿದ್ದಾಗ ರೈತರಿಗೆ 6ರಿಂದ 7 ಗಂಟೆಗೆ ವಿದ್ಯುತ್ ನೀಡುವುದನ್ನು ಏರಿಸಿದೆ. ಕೃಷ್ಣ ಅವರ ಕಾಲದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ, ಸ್ತ್ರೀಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ, ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡಿದರು ಎಂದರು.

ತಮ್ಮ ಮೊದಲ ಸರ್ಕಾರದ ಅಧಿಯಲ್ಲಿ ಬಡವರ ಹೊಟ್ಟೆ ತುಂಬಿಸಲು ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ನೀಡಿದರು. ಈಗ ಅಧಿಕಾರಕ್ಕೆ ಬಂದ ಕೂಡಲೇ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಜಾರಿಗೊಳಿಸಿದ್ದೇವೆ. ಇಂತಹ ಒಂದೇ ಒಂದು ಕಾರ್ಯಕ್ರಮವನ್ನು ಮಾಡಿದ್ದಾರಾ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

Key words: Channapatna, By-election, DCM, DK Shivakumar