Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page 2ನೇ ಬಾರಿಗೆ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಗೆ ಶುಭ ಕೋರಿದ ರಾಹುಲ್ ಗಾಂಧಿ

2ನೇ ಬಾರಿಗೆ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಗೆ ಶುಭ ಕೋರಿದ ರಾಹುಲ್ ಗಾಂಧಿ

ನವದೆಹಲಿ,ನವೆಂಬರ್,8,2024 (www.justkannada.in):  ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತ ಪಡೆದು 2ನೇ ಬಾರಿಗೆ  ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಭಕೋರಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರದ ಮೂಲಕ ಶುಭ ಕೋರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೇರಿಕಾ ಅಧ್ಯಕ್ಷರಾಗಿ 2ನೇ ಅವಧಿಗೆ ಆಯ್ಕೆಯಾಗಿದ್ದೀರಿ. ನಿಮ್ಮ ವಿಜಯಕ್ಕೆ ಅಭಿನಂದನೆಗಳು ಎಂದು  ಅಭಿನಂದನೆ ಸಲ್ಲಿಸಿದ್ದಾರೆ.

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ 295 ಸ್ಥಾನಗಳನ್ನ ಪಡೆದು ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ  ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡೆಮೊಕ್ರೆಟಿಕ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಕಮಲಾ ಹ್ಯಾರಿಸ್ 226 ಸ್ಥಾನಗಳನ್ನ ಗಳಿಸಿ ಬಹುಮತ ಪಡೆಯುವಲ್ಲಿ ವಿಫಲರಾದರು.

key words: Rahul Gandhi, wished, Donald Trump, elected, President, United States