Saturday, September 19, 2026

BDA Apartments

Home Front Page ವಿದ್ಯಾರ್ಥಿ ನಿಗೂಢ ಸಾವು ಕೇಸ್: ಏಕಲವ್ಯ ವಸತಿ ಶಾಲೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ, ಪರಿಶೀಲನೆ

ವಿದ್ಯಾರ್ಥಿ ನಿಗೂಢ ಸಾವು ಕೇಸ್: ಏಕಲವ್ಯ ವಸತಿ ಶಾಲೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ, ಪರಿಶೀಲನೆ

ತುಮಕೂರು,ನವೆಂಬರ್,8,2024 (www.justkannada.in): ಇತ್ತೀಚೆಗೆ ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿ  ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಎರಡ್ಮೂರು ದಿನಗಳ ಹಿಂದೆ ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ13 ವರ್ಷದ ವಿದ್ಯಾರ್ಥಿ ಅಭಿಷೇಕ್ ನಿಗೂಢವಾಗಿ ಸಾವನ್ನ‍ಪ್ಪಿದ್ದನು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯನ್ನ ಸಂಪೂರ್ಣವಾಗಿ ಪರಿಶಿಲಿಸಿದರು. ನಂತರ ವಿದ್ಯಾರ್ಥಿ ಸಾವಿನ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಚಿವ ಪರಮೇಶ್ವರ್ ಅವರಿಗೆ ಡಿಸಿ ಶುಭ ಕಲ್ಯಾಣ್ ಎಸ್ ಪಿ ಅಶೋಕ್ ಸಾಥ್ ನೀಡಿದರು.

Key words:  Minister, Parameshwar, visits, Eklavya Residential School