Saturday, August 22, 2026

BDA Apartments

Home Front Page ಲೋಕಾಯುಕ್ತ ತನಿಖೆ ಮ್ಯಾಚ್ ಫಿಕ್ಸಿಂಗ್ ಎಂದ ಬಿಜೆಪಿಗೆ ತಿರುಗೇಟು ಕೊಟ್ಟ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಲೋಕಾಯುಕ್ತ ತನಿಖೆ ಮ್ಯಾಚ್ ಫಿಕ್ಸಿಂಗ್ ಎಂದ ಬಿಜೆಪಿಗೆ ತಿರುಗೇಟು ಕೊಟ್ಟ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ನವೆಂಬರ್,7,2024 (www.justkannada.in):  ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯ ವಿಚಾರಣೆ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದ ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಎರಡು ಗಂಟೆ  ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಬಿಜೆಪಿ ಕೇಳಿ ಸಿಎಂ ವಿಚಾರಣೆ ಮಾಡಬೇಕಾ..?  ಎಂದು ಕುಟಕಿದರು.

ಜೆಪಿಸಿ ವಕ್ಫ್ ಭೂಮಿ ಪರಾಮರ್ಶೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅವರು ಸಮಿತಿ ಆಗಿ ಬಂದ ಹಾಗೆ ಕಾಣುತ್ತಿಲ್ಲ. ಯಾಕಂದ್ರೆ ಸಮಿತಿ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಯಮ ಗಾಳಿಗೆ ತೂರಿ ಒಬ್ಬರೇ ಹೋಗಿದ್ದಾರೆ ಎಂದು ಟೀಕಿಸಿದರು.

Key words: Home Minister, Dr. G. Parameshwar , BJP,  Lokyukta