Thursday, August 6, 2026

BDA Apartments

Home Front Page ಸಿಎಂಗೆ ಕ್ಲೀನ್ ಚಿಟ್ ಕೊಡಲು ತಯಾರಿ: ಮುಡಾ ಕೇಸ್ ಸಿಬಿಐಗೆ ವಹಿಸಿ- ಆರ್ ಅಶೋಕ್ ಆಗ್ರಹ

ಸಿಎಂಗೆ ಕ್ಲೀನ್ ಚಿಟ್ ಕೊಡಲು ತಯಾರಿ: ಮುಡಾ ಕೇಸ್ ಸಿಬಿಐಗೆ ವಹಿಸಿ- ಆರ್ ಅಶೋಕ್ ಆಗ್ರಹ

ಬಳ್ಳಾರಿ,ನವೆಂಬರ್,6,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲು ತಯಾರಿ ನಡೆಸಿದ್ದಾರೆ. ಹೀಗಾಗಿ ಪ್ರಕರಣವನ್ನ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಬಳ್ಳಾರಿಯ ಸಂಡೂರಿನಲ್ಲಿ ಇಂದು ಮಾತನಾಡಿದ ಆರ್.ಅಶೋಕ್, ಒಂದುವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಹಗರಣದಲ್ಲಿ ಮುಳುಗಿ ಹೋಗಿದೆ. ಸಿಎಂ ಸಿದ್ದರಾಮಯ್ಯ ನಾನು ತೆರೆದ ಪುಸ್ತಕ ಎಂದು ಹೇಳುತ್ತಾರೆ. ಆದರೆ ತೆರದು  ನೋಡಿದ್ರೆ ಎಲ್ಲಾ ಕಪ್ಪು ಇದೆ.  ಸಿಎಂ ಸಿದ್ದರಾಮಯ್ಯ ಗೆ 14 ಸೈಟ್ ಯಾವ ಲೆಕ್ಕನೂ ಇಲ್ಲ 3000 ಕೋಟಿ ಹಣ ಯಾವ ಲೆಕ್ಕನೂ ಇಲ್ಲ ಎಂದು ಕಿಡಿಕಾರಿದರು.

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣ ಲೂಟಿ ಮಾಡಿದ್ದಾರೆ.   187 ಕೋಟಿ ಲೂಟಿ ಆಗಿದೆ ಅಂದರೆ 87 ಕೋಟಿ ಅಂದರು.   ಅಬಕಾರಿ ಇಲಾಖೆಯಲ್ಲಿ ಲೂಟಿಯಾಗಿದೆ. ಅಬಕಾರಿ ಸಚಿವರನ್ನ ಕೇಳಿದರೇ ನನಗೆ ಗೊತ್ತಿಲ್ಲ ಅಂತಾರೆ. ಇನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಗ್ಯಾರಂಟಿಯೇ ಇಲ್ಲ ಎಂದು ಆರ್.ಅಶೋಕ್ ಟೀಕಿಸಿದರು.

Key words: Prepare, clean chit,  CM, Muda, R Ashok