Friday, August 14, 2026

BDA Apartments

Home Cinema ನಟ ದರ್ಶನ್ ಗೆ ನೀಡಬೇಕಾದ ಚಿಕಿತ್ಸೆ ಕುರಿತ ವರದಿ ಹೈಕೋರ್ಟ್ ಗೆ ಸಲ್ಲಿಕೆ

ನಟ ದರ್ಶನ್ ಗೆ ನೀಡಬೇಕಾದ ಚಿಕಿತ್ಸೆ ಕುರಿತ ವರದಿ ಹೈಕೋರ್ಟ್ ಗೆ ಸಲ್ಲಿಕೆ

ಸಾಂದರ್ಭಿಕ ಚಿತ್ರ

ಬೆಂಗಳೂರು,ನವೆಂಬರ್,6,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟ ದರ್ಶನ್ ಗೆ ನೀಡಬೇಕಾದ ಚಿಕಿತ್ಸೆಯ ವರದಿಯನ್ನ ಇಂದು ಹೈಕೋರ್ಟ್ ಗೆ ಸಲ್ಲಿಸಲಾಗಿದೆ.

ನಟ ದರ್ಶನ್ ಗೆ ಬೆನ್ನುನೋವು ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ನಡುವೆ ನಟ ದರ್ಶನ್ ಚಿಕಿತ್ಸೆಗೆ ದಾಖಲಾದ  ಒಂದು ವಾರದೊಳಗೆ ವರದಿ ಸಲ್ಲಿಸಲು ಹೈಕೋರ್ಟ್ ಷರತ್ತು ವಿಧಿಸಿತ್ತು.

ಈ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಗೆ ನೀಡಬೇಕಾದ ಚಿಕಿತ್ಸೆ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ  ಹೈಕೋರ್ಟ್ ಗೆ ಸಲ್ಲಿಸಲಾಗಿದೆ. ನಟ ದರ್ಶನ್ ಗೆ ಬೆನ್ನನೋವಿನ ಸಮಸ್ಯೆ ಕುರಿತು ವರದಿಯನ್ನು ವೈದ್ಯರು ಸಲ್ಲಿಸಿದ್ದಾರೆ.

Key words:  actor Darshan, treatment, report, High Court