Tuesday, August 11, 2026

BDA Apartments

Home Front Page ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ ಬಿಎಸ್ ವೈ

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ ಬಿಎಸ್ ವೈ

ಬೆಂಗಳೂರು,ನವೆಂಬರ್,6,2024 (www.justkannada.in) ತಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎನ್ನುವ ಸಿಎಂ ಸಿದ್ದರಾಮಯ್ಯನವರೇ ನೀವು ಪ್ರಾಮಾಣಿಕರಾಗಿದ್ದರೇ ಮುಡಾ ಹಗರಣವನ್ನು ಸಿಬಿಐಗೆ ವಹಿಸಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಯಿಂದ ಏನೂ ಆಗುವುದಿಲ್ಲ‌. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನನ್ನದು ತೆರೆದ ಪುಸ್ತಕ ಅನ್ನುತ್ತಾರೆ.  ಪ್ರಾಮಾಣಿಕರಿದ್ದರೆ. ಮುಡಾ ಹಗರಣವನ್ನ  ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.

‘ಎಲ್ಲರೂ ಈ ಒತ್ತಾಯ ಮಾಡುತ್ತಿದ್ದಾರೆ. ಇದನ್ನು ಸಿಬಿಐಗೆ ಕೊಡಬೇಕು ಅಂತ ನಾನು ಒತ್ತಾಯ ಮಾಡುತ್ತಿದ್ದೇನೆ. ನೀವು ಭ್ರಷ್ಟಾಚಾರದಲ್ಲಿ ಮುಳುಗಿದ್ದಿರಾ ಎಂಬುದು ಜಗತ್ತಿಗೆ ಗೊತ್ತಿದೆ. ಸಿಬಿಐಗೆ ಪ್ರಕರಣ ವಹಿಸಿದರೆ ಸತ್ಯ ಹೊರ ಬರುತ್ತದೆ’ ಎಂದರು.

ಮೂರು ಕ್ಷೇತ್ರದಲ್ಲಿ ಎನ್ ಡಿಎ ಗೆಲುವು ಖಚಿತ

ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಮೂರು ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗುತ್ತಿದ್ದೇನೆ. ಸಿಎಂ ಹೇಳುವ ಪ್ರಕಾರ, ಉಪಚುನಾವಣೆಯಿಂದ ಸರ್ಕಾರದ ಮೇಲೆ ಏನೂ ಪರಿಣಾಮ ಇಲ್ಲ. ರಾಜಕೀಯ ದೊಂಬರಾಟ ಮಾಡಿ, ಹಗಲು ದರೋಡೆ ಮಾಡುತ್ತಾ ಲೂಟಿಯಲ್ಲಿ ನಿರತರಾಗಿದ್ದಾರೆ ಎಂದು ಬಿಎಸ್ ವೈ ಕಿಡಿಕಾರಿದರು.

Key words: Muda scam, BSY, challenged, CM Siddaramaiah