Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ಬೆಳಿಗ್ಗೆ ವಿಚಾರಣೆಯಂತೆ, ಮಧ್ಯಾಹ್ನ ಪ್ರಚಾರವಂತೆ: ಇದೆಲ್ಲಾ ಮ್ಯಾಚ್ ಫಿಕ್ಸಿಂಗ್ – ಆರ್.ಅಶೋಕ್ ಟೀಕೆ

ಬೆಳಿಗ್ಗೆ ವಿಚಾರಣೆಯಂತೆ, ಮಧ್ಯಾಹ್ನ ಪ್ರಚಾರವಂತೆ: ಇದೆಲ್ಲಾ ಮ್ಯಾಚ್ ಫಿಕ್ಸಿಂಗ್ – ಆರ್.ಅಶೋಕ್ ಟೀಕೆ

ಬೆಂಗಳೂರು,ನವೆಂಬರ್,6,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ  ಹಾಜರಾಗಿದ್ದುಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಸಿದ್ದರಾಮಯ್ಯ 40 ವರ್ಷದ ರಾಜಕೀಯ ಜೀವನದಲ್ಲಿ ನನ್ನದು ತೆರೆದ ಪುಸ್ತಕ ಅಂದಿದ್ದರು. ಪುಸ್ತಕ ತೆರೆದರೇ ಬರೀ ಕಪ್ಪು ಚುಕ್ಕೆ ಇದೆ. ಇಂದಿನ ಲೋಕಾಯುಕ್ತ ವಿಚಾರಣೆಯೂ ಮ್ಯಾಚ್ ಫಿಕ್ಸಿಂಗ್. ವಿಚಾರಣೆ ಎದುರಿಸಲು ಟೈಮ್ ಟೇಬಲ್ ಹಾಕಿದ್ದಾರೆ. ಬೆಳಿಗ್ಗೆ ವಿಚಾರಣೆಯಂತೆ,  ಮಧ್ಯಾಹ್ನ ಪ್ರಚಾರವಂತೆ ಎಂದು ಲೇವಡಿ ಮಾಡಿದರು.

 ಅಬಕಾರಿ ಪ್ರಕರಣ: ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸಚಿವ ಆರ್ ಬಿ ತಿಮ್ಮಾಪುರ ವಾರಕ್ಕೆ 18 ಕೋಟಿ ಹಪ್ತಾ ವಸೂಲಿ ಮಾಡುತ್ತಿದ್ದಾರೆ.  ಮದ್ಯದಂಗಡಿಗಳಿಂದ ತಿಮ್ಮಾಪುರ ಹಪ್ತಾ ವಸೂಲಿ ಮಾಡುತ್ತಿದ್ದಾರೆ ರಾಜ್ಯಪಾಲರಿಗೆ ಮದ್ಯದಂಗಡಿ ಮಾಲೀಕರೇ ದೂರು ನೀಡಿದ್ದಾರೆ. ಹೀಗಾಗಿ ಅಬಕಾರಿ ಪ್ರಕರಣ ಸಿಬಿಐಗೆ ವಹಿಸಬೇಕು. ಪ್ರಕರಣದಲ್ಲಿ ಇಡಿ ಮಧ್ಯ ಪ್ರವೇಶಿಸಬೇಕು ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Key words: CM Siddaramaiah, hearing, Lokayukta, R.Ashok