Thursday, September 10, 2026

BDA Apartments

Home Crime ನಾಳೆ ಮೈಸೂರು ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ : ಪೊಲೀಸರ ಬಿಗಿ ಭದ್ರತೆ..!

ನಾಳೆ ಮೈಸೂರು ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ : ಪೊಲೀಸರ ಬಿಗಿ ಭದ್ರತೆ..!

CM Siddaramaiah visit Mysore Loka Yuktha tomorrow for MUDA enquiry.

ಮೈಸೂರು, ನ.05,2024: (www.justkannada.in news) ಲೋಕಯುಕ್ತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಂಪ್ಲೀಟ್‌ ಅಲರ್ಟ್.

ಮೈಸೂರು ನಗರ ಲೋಕಾಯುಕ್ತ ಕಚೇರಿ ಬಳಿ ಬಿಗಿ ಭದ್ರತೆ. ಬಂದೋಬಸ್ಥ್ ವ್ಯವಸ್ಥೆ . ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಟ್ಕರ್‌ ನೇತೃತ್ವದಲ್ಲಿ ಸಿದ್ಧತೆ .

ಲೋಕಯುಕ್ತ ಕಚೇರಿ ಬಳಿಯ ದೇವರಾಜ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕಮಿಷನರ್. ಮತ್ತೊಂದೆಡೆ ಮುಂಜಾಗ್ರತ ಕ್ರಮವಾಗಿ  ಬ್ಯಾರಿಕೇಡ್ ಗಳನ್ನು ಠಾಣೆ ಬಳಿ ಜಮಾಯಿಸಿಕೊಂಡಿರುವ  ಪೊಲೀಸರು.

ಕಚೇರಿಯ ಅವಧಿ ಮುಗಿದರೂ ಕಾರ್ಯ ನಿರ್ವಹಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು. ನಾಳೆ ಸಿಎಂ ವಿಚಾರಣೆ ಹಿನ್ನಲೆ,  ಅಧಿಕಾರಿಗಳ ಸಿದ್ಧತೆ. ಲೋಕಾಯುಕ್ತ ಅಧಿಕಾರಿಗಳಿಂದ ಸಿಎಂ ವಿಚಾರಣೆಗೆ ಸಿದ್ಧತೆ.

ಲೋಕಾಯುಕ್ತ ಕಚೇರಿ ಬಳಿ ಬಂದೋಬಸ್ತ್ ಮಾಡುತ್ತಿರುವ ಪೊಲೀಸರು. ಕಚೇರಿ ಸುತ್ತಲು ಬ್ಯಾರಿಕೇಡ್ ಅಳವಡಿಕೆ. ಲೋಕಾಯುಕ್ತ ಕಚೇರಿ ಬಳಿಯ  ನಾಲ್ಕು ರಸ್ತೆಗಳನ್ನ ಬಂದ್ ಮಾಡಲಿರುವ ಪೊಲೀಸರು.

key words: CM Siddaramaiah, Mysore Loka Yuktha, MUDA, enquiry.

CM Siddaramaiah visit Mysore Loka Yuktha tomorrow for MUDA enquiry.