Saturday, September 19, 2026

BDA Apartments

ಬಿಜೆಪಿ ಬಡವರ ವಿರೋಧಿ: ಕೊಡೋದು ಇಲ್ಲ, ಕೊಟ್ಟಿದನ್ನ ಸಹಿಸೋದು ಇಲ್ಲ- ಸಚಿವ ರಾಮಲ...
Home Front Page ಬಿಜೆಪಿ ಬಡವರ ವಿರೋಧಿ: ಕೊಡೋದು ಇಲ್ಲ, ಕೊಟ್ಟಿದನ್ನ ಸಹಿಸೋದು ಇಲ್ಲ- ಸಚಿವ ರಾಮಲಿಂಗರೆಡ್ಡಿ

ಬಿಜೆಪಿ ಬಡವರ ವಿರೋಧಿ: ಕೊಡೋದು ಇಲ್ಲ, ಕೊಟ್ಟಿದನ್ನ ಸಹಿಸೋದು ಇಲ್ಲ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ನವೆಂಬರ್,4,2024 (www.justkannada.in):  ಬಿಜೆಪಿಯವರು ಬಡವರ ವಿರೋಧಿಗಳು. ಹೀಗಾಗಿ ಗ್ಯಾರಂಟಿ ವಿರೋಧ ಮಾಡುತ್ತಿದ್ದಾರೆ. ಬಿಜೆಪಿಯವರು ಕೊಡೋದು ಇಲ್ಲ, ಕೊಟ್ಟಿದನ್ನ ಸಹಿಸೋದು ಇಲ್ಲ ಎಂದು ಸಾರಿಗೆ  ಸಚಿವ ರಾಮಲಿಂಗರೆಡ್ಡಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಮೂರುವರೆ ವರ್ಷ ಗ್ಯಾರಂಟಿ ಯೋಜನೆ ಇದ್ದೇ ಇರುತ್ತದೆ.  ಮುಂದ ಚುನಾವಣೆ ಬರತ್ತದೆ ಆಗಲೂ ನಾವೇ ಗೆಲ್ಲುತ್ತೇವೆ. ಮತ್ತೆ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಮುಂದುವರೆಯುತ್ತದೆ. ಬಿಜೆಪಿ ಬಡವರ ವಿರೋಧಿಗಳು.  ಅವರು ಕೊಡೋದು ಇಲ್ಲ ಕೊಟ್ಟವರನ್ನೂ ಸಹಿಸೋದು ಇಲ್ಲ ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಲ ಮಾಡಿ ಹೋಗಿದ್ದಾರೆ ಎಂದರು.

ವಕ್ಫ್ ವಿರುದ್ದ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಬಿಜೆಪಿಗರು ವಿಪಕ್ಷದಲ್ಲೇ ಇರ್ತಾರೆ ಹಾಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನೋಟಿಸ್ ಕೊಡಲು ಬಿಜೆಪಿಯೇ ಕಾರಣ ಮಗುವನ್ನು ಚಿವುಟುವುದು ಅವರೇ ತೊಟ್ಟಿಲು ತೂಗುವುದು ಅವರೇ ಎಂದು ಟಾಂಗ್ ಕೊಟ್ಟರು.

Key words: BJP, protest, Minister, Ramalingareddy