Tuesday, August 4, 2026

BDA Apartments

Home Front Page ಬಿಜೆಪಿಯದ್ದು ಪ್ರತಿಭಟನೆಯಲ್ಲ, ಅದು ರಾಜಕಾರಣವಷ್ಟೆ- ಡಿಸಿಎಂ ಡಿಕೆ ಶಿವಕುಮಾರ್ ಟೀಕೆ

ಬಿಜೆಪಿಯದ್ದು ಪ್ರತಿಭಟನೆಯಲ್ಲ, ಅದು ರಾಜಕಾರಣವಷ್ಟೆ- ಡಿಸಿಎಂ ಡಿಕೆ ಶಿವಕುಮಾರ್ ಟೀಕೆ

ಬೆಂಗಳೂರು,ನವೆಂಬರ್,4,2024 (www.justkannada.in): ವಕ್ಫ್  ಹೆಸರಿನಲ್ಲಿ ರಾಜ್ಯ ಸರ್ಕಾರ ರೈತರ ಆಸ್ತಿ ಕಬಳಿಕೆ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ನಡೆಸುತ್ತಿರುವುದು ಪ್ರತಿಭಟನೆಯಲ್ಲ, ಅದು ರಾಜಕಾರಣವಷ್ಟೆ. ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ನವೆಂಬರ್ 13 ರಂದು ಚನ್ನಪಟ್ಟಣ ಉಪಚುನಾವಣೆ ಕಣ ರಂಗೇರಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಯಾವ ರಣನೂ ಇಲ್ಲ ರಂಗನೂ ಇಲ್ಲ ರಣರಂಗ ಅಡಿದವರೆಲ್ಲಾ ಹೋಗಿದ್ದಾರೆ. ಮತದಾರರ ಹೃದಯ ಗೆಲ್ಲಬೇಕು ಅಷ್ಟೆ ನಮ್ಮ ಕೆಲಸವನ್ನು ಜನರು ಗುರುತಿಸಬೇಕು. ಡಿಕೆ ಶಿವಕುಮಾರ್ ಹೆಚ್ ಡಿಕೆ ಏನು  ನೀಡಿದ್ದಾರೆ. ಯೋಗಿ ಏನು ನೀಡಿದ್ದಾರೆ ಅನ್ನೋದು ಮುಖ್ಯ. ನಮ್ಮ ಕೆಲಸಕ್ಕೆ ಜನ ಮಾರ್ಕ್ಸ್ ಕೊಡ್ತಾರೆ ಎಂದು ನುಡಿದರು.

Key words: BJP, protest,  politics, DCM, DK Shivakumar