Tuesday, August 4, 2026

BDA Apartments

Home Front Page ರಾಜ್ಯದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡುವಂತೆ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹ

ರಾಜ್ಯದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡುವಂತೆ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹ

ಚಿಕ್ಕಮಗಳೂರು, ನವೆಂಬರ್,2,2024 (www.justkannada.in): ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಮುಗಿಬೀಳುತ್ತಿದ್ದು ಇದೀಗ ರಾಜ್ಯದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಿ.ಟಿ.ರವಿ, ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ.ಅವರೇ ನೇರವಾಗಿ ಭಾಗಿಯಾಗಿದ್ದಾರೆ  ನಾನು ಈ ಹಿಂದೆಯೇ ಸಿದ್ದರಾಮಯ್ಯ ಅವರ ಕುರಿತು ಹೇಳಿದ್ದೆ.  ಅವರು ಎರಡು ರೀತಿ ಆಕ್ಟ್ ಮಾಡುತ್ತಾರೆ. ಹಿಂದೂಗಳ ವೋಟ್ ಬೇಕಾದರೆ ಸಿದ್ದರಾಮಯ್ಯ ಆಗ್ತಾರೆ. ಮುಸ್ಲಿಂರ ವೋಟ್ ಬೇಕಾದರೆ ಸಿದ್ರಾಮುಲ್ಲಾ ಖಾನ್ ಆಗ್ತಾರೆ ಎಂದು ಕಿಡಿಕಾರಿದರು.

ಅಲ್ಪಸಂಖ್ಯಾತರ ಓಲೈಕೆಗಾಗಿ ಈಗ ವಕ್ಫ್ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ  ನೇರವಾಗಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿರುವ ವಕ್ಫ್ ಬೋರ್ಡ್ ಮೊದಲು ರದ್ದು ಮಾಡಬೇಕು ಎಂದು ಸಿಟಿ ರವಿ ಆಗ್ರಹಿಸಿದರು.

Key words: MLC, CT Ravi, Waqf Board, abolish