Tuesday, August 11, 2026

BDA Apartments

Home Crime ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು: ತಂದೆ ಮಗಳು ಸಾವು

ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು: ತಂದೆ ಮಗಳು ಸಾವು

ಹಾಸನ,ನವೆಂಬರ್,1,2024 (www.justkannada.in): ಹಾಸನಾಂಬೆ ದರ್ಶನ ಪಡೆದು ಸಂಬಂಧಿಕರ ಮನೆಗೆ ನಡೆದುಕೊಂಡು ತೆರಳುತ್ತಿದ್ದ ಮೂವರಿಗೆ ಕಾರು ಡಿಕ್ಕಿಯಾಗಿ  ತಂದೆ ಮಗಳು ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ನಗರದ ತಣ್ಣೀರಹಳ್ಳ ಬಳಿ ಈ ಘಟನೆ ನಡೆದಿದೆ. ತಂದೆ ಕುಮಾರ (38) ಹಾಗೂ ಪುತ್ರಿ ಕಾವ್ಯ(12) ಮೃತಪಟ್ಟವರು. ಘಟನೆಯಲ್ಲಿ ಪತ್ನಿ ಪುಟ್ಟಮ್ಮಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಆಲೂರು ತಾಲೂಕಿನ ಎನ್ ಹೆಚ್ ಪುರ ನಿವಾಸಿಗಳು ಎಂದು ತಿಳಿದು ಬಂದಿದೆ.

ದಂಪತಿ ಮತ್ತು ಮಗಳು ನಿನ್ನೆ ರಾತ್ರಿ ಹಾಸನಾಂಬೆ ದೇವಿ ದರ್ಶನ ಪಡೆದು ವಾಪಸ್ ಹಾಸನದಲ್ಲಿದ್ದ ವಿಜಯನಗರದ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಮೂವರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದ್ದಾರೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: car, collision, devotees, Hassanambe, father, daughter, died